ಯುರೋಪಿಯನ್ ಒಕ್ಕೂಟದ 21 ದೇಶಗಳಲ್ಲಿ ಚುನಾವಣೆ ಪರ್ವ

ಯುರೋಪಿಯನ್ ಒಕ್ಕೂಟದ ಸುಮಾರು 27 ದೇಶಗಳಲ್ಲಿ ಭಾನುವಾರ ಚುನಾವಣೆಗಳು ನಡೆಯಲಿರುವ ಕಾರಣ, ಈ ಭಾನುವಾರವನ್ನು ಸೂಪರ್-ಭಾನುವಾರ ಎಂದು ಕರೆಯಲಾಗಿದೆ. ಉಕ್ರೇನ್ ದೇಶದಲ್ಲಿ ಯುದ್ಧ ಹಾಗೂ ವಲಸಿಗರ ಸಮಸ್ಯೆಗಳ ನಡುವೆಯೇ ಈ ಚುನಾವಣೆಗಳು ನಡೆಯುತ್ತಿವೆ.

ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್

ಭಾನುವಾರ ಯುರೋಪಿಯನ್ ಒಕ್ಕೂಟದ 27 ದೇಶಗಳಿಗೆ ಒಟ್ಟಾಗಿ ಚುನಾವಣೆಗಳು ನಡೆಯಲಿವೆ. ಇಟಲಿ, ಫ್ರಾನ್ಸ್, ಜರ್ಮನಿ, ಪೋಲೆಂಡ್, ಮುಂತಾದ ದೇಶಗಳು ಚುನಾವಣೆಗಳು ನಡೆಯುತ್ತಿರುವ ದೇಶಗಳ ಪೈಕಿ ಪ್ರಮುಖ ದೇಶಗಳಾಗಿವೆ.

ದಿನೇ ದಿನೇ ಸಮಾಜವು ಧೃವೀಕರಣವಾಗುತ್ತಿರುವ ಹಿನ್ನೆಲೆಯಲ್ಲಿ ಸುಮಾರು ಇನ್ನೂರ ನಲವತ್ತು ಮಿಲಿಯನ್ ಪ್ರಜೆಗಳು ಮತದಾನವನ್ನು ಮಾಡಲಿದ್ದಾರೆ. ಮುಂದುವರೆಯುತ್ತಿರುವ ಉಕ್ರೇನ್ ಯುದ್ಧ, ವಲಸಿಗರ ಸಮಸ್ಯೆಗಳು ಸೇರಿದಂತೆ ಹತ್ತೂ ಹಲವು ಸಮಸ್ಯೆಗಳ ನಡುವೆಯೇ ಈ ಚುನಾವಣೆಗಳು ನಡೆಯಲಿದ್ದು, ಕುತೂಹಲ ಮೂಡಿಸಿವೆ.

ಈ ಚುನಾವಣೆಗಳಲ್ಲಿ ಹೆಚ್ಚಾಗಿ ಬಲಪಂಥೀಯ ಪಕ್ಷಗಳೇ ಗೆಲ್ಲುವ ಸಂಭವವಿದ್ದು, ಈ ಟ್ರೆಂಡ್ ಜಾಗತಿಕ ಮಟ್ಟದಲ್ಲಿ ಕೋಮು ದೃವೀಕರಣ ಸೇರಿದಂತೆ ಇನ್ನಿತರ ಬಲಪಂಥೀಯ ಸೈಧ್ಧಾಂತಿಕ ಸಂಘರ್ಷಗಳಿಗೆ ಕಾರಣವಾಗಲಿವೆ.

ಚುನಾವಣೆಗಳ ವಿವಿಧ ಸಂಯೋಗಗಳು ಸೇರಿದಂತೆ ಹಲವು ವಿಶ್ಲೇಷಣೆಗಳ ಪ್ರಕಾರ ಇಟಲಿ ಪ್ರಧಾನಮಂತ್ರಿಗಳ "ಬ್ರದರ್ಸ್ ಆಫ್ ಇಟಲಿ" ಪಕ್ಷವು ಗೆದ್ದರೆ ಅದು ಯುರೋಪಿಯನ್ ಒಕ್ಕೂಟದಲ್ಲಿ ಪ್ರಧಾನ ಪಾತ್ರವನ್ನು ವಹಿಸಲಿದೆ ಎಂದು ಅಂದಾಜಿಸಲಾಗಿದೆ.

09 June 2024, 17:24