ಗಾಜಾ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಒತ್ತಡ ಹೇರುತ್ತಿರುವ ಪಾಶ್ಚಾತ್ಯ ದೇಶಗಳು
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಮಧ್ಯವರ್ತಿ ಕತಾರ್ ದೇಶವು ಕದನ ವಿರಾಮ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಇಸ್ರೇಲ್ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವವರೆಗೂ ಕಾಯುತ್ತಲಿದೆ ಎಂದು ಹೇಳಿದೆ.
ಕಳೆದ ವಾರ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದಂತೆ ಕತಾರ್ ದೇಶವು ಕದನ ವಿರಾಮ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಇಸ್ರೇಲ್ ಹಾಗೂ ಹಮಾಸ್ ಅವರಿಗೆ ಮನವರಿಕೆಯನ್ನು ಮಾಡಿದ್ದು, ಅವರ ಪ್ರಸ್ತಾವನೆಗಳು ಇಬ್ಬರಿಗೂ ಹತ್ತಿರವಾಗುತ್ತಿವೆ ಎಂದು ಹೇಳಿದೆ.
ಈ ಕುರಿತು ಹಮಾಸ್ ನಾಯಕರಲ್ಲೇ ಕೊಂಚ ಭಿನ್ನಮತ ಉಂಟಾಗಿದ್ದು, ಹಿರಿಯ ಹಮಾಸ್ ನಾಯಕರೊಬ್ಬರು ಅಮೇರಿಕಾದ ನಡೆಯನ್ನು ಟೀಕಿಸಿದ್ದಾರೆ ಮಾತ್ರವಲ್ಲದೆ, ಈ ಒಪ್ಪಂದಕ್ಕೆ ಹಮಾಸ್ ಅಡ್ಡಿ ಪಡಿಸುತ್ತಿದೆ ಎಂದು ಎಲ್ಲರೂ ಬಿಂಬಿಸುತ್ತಿದ್ದಾರೆ ಎಂದು ತಮ್ಮ ಸಹನೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಒಪ್ಪಂದದ ಪ್ರಕಾರ ಉಭಯ ಪಕ್ಷಗಳೂ ಕದನ ವಿರಾಮಕ್ಕೆ ಸಮ್ಮತಿಸಿ, ಎರಡೂ ಕಡೆಯವರ ಯುದ್ಧ ಖೈದಿಗಳನ್ನು ಪರಸ್ಪರ ಬಿಡುಗಡೆ ಮಾಡಬೇಕಾಗಿದೆ.
ಗಾಜಾದಲ್ಲಿನ ಕದನ ವಿರಾಮಕ್ಕೆ ಅನೇಕ ತಿಂಗಳುಗಳಿಂದ ಮಾತುಕತೆ ಹಾಗೂ ಪ್ರಯತ್ನಗಳು ನಡೆಯುತ್ತಲೇ ಇವೆ.