ಹಿಂಸೆಯ ಸಂತ್ರಸ್ತರಾದ ಮುಗ್ಧ ಮಕ್ಕಳ ದಿನಾಚರಣೆಯನ್ನು ಆಚರಿಸಿದ ಜಗತ್ತು

ವಿಶ್ವಸಂಸ್ಥೆಯು 1982 ರಲ್ಲಿ ಜೂನ್ 4 ರಂದು ಪ್ರತಿ ವರ್ಷ ಹಿಂಸೆಗೆ ಸಂತ್ರಸ್ತರಾದ ಮುಗ್ದ ಮಕ್ಕಳ ದಿನಾಚರಣೆಯನ್ನು ಆಚರಿಸಲು ಕರೆ ನೀಡಿದೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ, ಅಜಯ್ ಕುಮಾರ್

ಜೂನ್ ನಾಲ್ಕರಂದು ಹಿಂಸೆಯ ಸಂತ್ರಸ್ತರಾದ ಮುಗ್ಧ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಯು 1982ರಲ್ಲಿ ಹಿಂಸೆಗೆ ತುತ್ತಾದ ಮುಗ್ಧ ಮಕ್ಕಳ ದಿನಾಚರಣೆಯನ್ನು ಆಚರಿಸಲು ಕರೆ ನೀಡಿದೆ. ಇದು ನಾನ ರೀತಿಯ ದೌರ್ಜನ್ಯ ಹಾಗೂ ಹಿಂಸೆಗೆ ಒಳಗಾಗಿರುವ ಹಾಗೂ ಅದರ ಸಂತ್ರಸ್ತರಾಗಿರುವ ಮಕ್ಕಳ ಕುರಿತು ಇತರರಿಗೆ ಜಾಗೃತಿಯನ್ನು ಮೂಡಿಸಲು ಈ ವಿಶ್ವದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ದೈಹಿಕ, ಮಾನಸಿಕ ಹಾಗೂ ಭಾನಾತ್ಮಕವಾಗಿ ಹಿಂಸೆಗೆ ಅಥವಾ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳ ಕುರಿತು ಅರಿವು ಮೂಡಿಸಲು ಇದನ್ನು ಆರಂಭಿಸಲಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ನಿಧಿಯಾಗಿರುವ ಯೂನಿಸೆಫ್ ವರದಿಯ ಪ್ರಕಾರ ಈ ಜಗತ್ತಿನಾದ್ಯಂತ ಒಂದು ಬಿಲಿಯನ್ ಮಕ್ಕಳು ನಾನಾ ರೀತಿಯ ದೌರ್ಜನ್ಯಕ್ಕೆ ಹಾಗೂ ಹಿಂಸೆಗೆ ಒಳಗಾಗಿದ್ದಾರೆ. ಇಬ್ಬರಲ್ಲಿ ಒಬ್ಬರು ನಾನಾ ರೀತಿಯ ಹಿಂಸೆಗೆ ಒಳಗಾಗಿದ್ದಾರೆ ಎಂದು ಯೂನಿಸೆಫ್ ವರದಿ ಮಾಡಿದೆ.

ಮಕ್ಕಳು ಹಿಂಸೆಗೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹಲವು ಕಾರಣಗಳ ಪೈಕಿ ಲೈಂಗಿಕ ದೌರ್ಜನ್ಯ, ಯುದ್ಧ, ದಾಳಿಗಳು ಹಾಗೂ ಇನ್ನಿತರ ರೀತಿಯ ಹಿಂಸೆಗಳು ಪ್ರಧಾನ ಕಾರಣವಾಗಿವೆ. ದಿನೇ ದಿನೇ ಮಕ್ಕಳ ವಿರುದ್ಧದ ಹಿಂಸೆ ಹಾಗೂ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ ಎಂದು ಅನೇಕ ಅಂಕಿ ಅಂಶಗಳು ಪ್ರಸ್ತುತಪಡಿಸಿವೆ.

ವ್ಯಾಟಿಕನ್ ನಗರದಲ್ಲಿ ಇರುವ ಬಂಬಿನೋ ಜೇಸು ಮಕ್ಕಳ ಆಸ್ಪತ್ರೆಯು ಈವರೆಗೂ ಸಾವಿರಾರು ಮಕ್ಕಳಿಗೆ ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೀಡುತ್ತಾ ಬಂದಿದೆ. ಹಿಂಸೆಯ ಸಂತ್ರಸ್ತರಾಗಿರುವ ವಿಶೇಷವಾಗಿ ಯುದ್ಧದ ಸಂತ್ರಸ್ಥರಾಗಿರುವವರಿಗೆ ಈ ಆಸ್ಪತ್ರೆಯು ಎಲ್ಲಾ ರೀತಿಯ ನೆರವನ್ನು ನೀಡುತ್ತಾ, ಮಕ್ಕಳಿಗೆ ಹಾಗೂ ಯುವಕರಿಗೆ ಭರವಸೆಯನ್ನು ನೀಡುತ್ತಾ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ.

04 June 2024, 17:38