TOPSHOT-PALESTINIAN-ISRAEL-CONFLICT TOPSHOT-PALESTINIAN-ISRAEL-CONFLICT  (AFP or licensors)

ಗಾಝಾ ನೆರವಿನ ಕುರಿತು ಅಂತರಾಷ್ಟ್ರೀಯ ಸಮಾವೇಷದ ಆತಿಥ್ಯ ವಹಿಸಲಿರುವ ಜೋರ್ಡನ್

ಮಂಗಳವಾರ ಜೋರ್ಡನ್ ದೇಶವು ಗಾಝಾ ಪ್ರದೇಶಕ್ಕೆ ತುರ್ತು ಮಾನವೀಯ ನೆರವು ನೀಡುವ ಕುರಿತು ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ.

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಗಾಝಾ ಪ್ರದೇಶಕ್ಕೆ ತುರ್ತು ಮಾನವೀಯ ನೆರವು ನೀಡುವ ಕುರಿತಂತೆ ಜೋರ್ಡನ್ ದೇಶವು ಮಂಗಳವಾರ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯು ಮೃತ ಸರೋವರದ ಬಳಿ (ಡೆಡ್ ಸೀ) ನಡೆಯಲಿದ್ದು, ಇದರಲ್ಲಿ ವಿಶ್ವಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರಗಳು ಭಾಗವಹಿಸಲಿವೆ.

ಈ ಸಭೆಯ ಮುಖ್ಯ ಉದ್ದೇಶ ಯುದ್ಧದಿಂದ ಜರ್ಜರಿತರಾಗಿರುವ ಗಾಝಾ ಪ್ರದೇಶಕ್ಕೆ ಮಾನವೀಯ ನೆರವನ್ನು ತುರ್ತಾಗಿ ನೀಡುವ ಹಿನ್ನೆಲೆ ಅಂತರಾಷ್ಟ್ರೀಯ ಸಮುದಾಯದ ಜೊತೆಗೆ ಚರ್ಚಿಸುವುದಾಗಿದೆ.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪವಿತ್ರ ತಂದೆ ಫ್ರಾನ್ಸಿಸ್ ಅವರು ಇದಕ್ಕೆ ತಮ್ಮ ಸಹಮತವನ್ನು ಹಾಗೂ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ಅತ್ಯಂತ ಪ್ರಮುಖ ಸಭೆಯಾಗಿದ್ದು, ಹೆಚ್ಚಿನ ದೇಶಗಳು ಇದರಲ್ಲಿ ಭಾಗವಹಿಸಿ ಮಾನವೀಯ ನೆರವು ಹಾಗೂ ಶಾಂತಿ ಸ್ಥಾಪನೆಗಾಗಿ ಶ್ರಮಿಸಬೇಕು ಹಾಗೂ ತಮ್ಮ ಸಂಪನ್ಮೂಲಗಳನ್ನು ವ್ಯಯಿಸಬೇಕು ಎಂದು ಹೇಳಿದರು.

ಅದಾಗಲೇ, ಈಜಿಪ್ಟ್ ದೇಶದ ವಾಯುಸೇನೆಯು ಗಾಝಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಿದ್ದು, ಆಹಾರ ಸೇರಿದಂತೆ ಇನ್ನಿತರ ಅವಶ್ಯಕ ಸಾಮಾಗ್ರಿಗಳನ್ನು ಇಳಿಸಿದೆ. ಯುನಿಸೆಫ್ ವರದಿಯ ಪ್ರಕಾರ ಈ ಯುದ್ಧದ ಕಾರಣ ಪೋಷಕರು ವಿವಿಧ ಪ್ರದೇಶದಲ್ಲಿ ಇರುವ ಮಕ್ಕಳನ್ನೂ ಸಹ ಭೇಟಿ ಮಾಡಲು ಆಗುತ್ತಿಲ್ಲ. ಇದಕ್ಕೆ ಆಸ್ಪದವೂ ನೀಡಲಾಗುತ್ತಿಲ್ಲ ಎಂದು ವರದಿಯಾಗಿದೆ.  

    

09 June 2024, 17:06