ಮೆಕ್ಕಾದಲ್ಲಿ ರಣಬಿಸಿಲು; 1000 ಹಜ್ ಯಾತ್ರಿಕರ ದುರ್ಮರಣ
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಮೆಕ್ಕಾದಲ್ಲಿ ಹಿಂದೆಂದೂ ಕಾಣದ ರಣ ಬಿಸಿಲಿನ ಹಿನ್ನೆಲೆಯಲ್ಲಿ 1000 ಕ್ಕೂ ಅಧಿಕ ಹಜ್ ಯಾತ್ರಿಕರು ದುರ್ಮರಣವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಜನರು ನೋಂದಣಿಯಾಗದ ಯಾತ್ರಿಕರೆಂದು ಗೊತ್ತಾಗಿದ್ದು, ಬಿರು ಬೇಸಿಗೆಯಲ್ಲಿ ತಣ್ಣನೆಯ ಸ್ಥಳಗಳು ಎಲ್ಲಿವೆ ಎಂಬ ಮಾಹಿತಿ ಇವರಿಗೆ ಇರಲಿಲ್ಲ ಎಂದು ಅಂದಾಜಿಸಲಾಗಿದೆ.
ಈಜಿಪ್ಟ್ ದೇಶವು ಈ ಘಟನೆ ಹೇಗೆ ನಡೆಯಿತು ಎಂಬುದನ್ನು ತನಿಖೆ ಮಾಡಲು ತನಿಖಾ ತಂಡವನ್ನು ರಚಿಸಿದೆ. ಹೀಗೆ ಭೀಕರ ತಾಪಮಾನದ ಕಾರಣ ಮೃತಪಟ್ಟವರಲ್ಲಿ ಬಹುತೇಕರು ಈಜಿಪ್ಟ್ ದೇಶದವರಾಗಿದ್ದಾರೆ ಎಂಬುದು ಕಂಡು ಬಂದಿದೆ.
ಇತ್ತೀಚೆಗೆ ಸೌದಿ ಅರೇಬಿಯಾದ ಈ ದೇಶದಲ್ಲಿ ಭೀಕರ ತಾಪಮಾನ ದಾಖಲಾಗುತ್ತಿದ್ದು, ನೂರಾರು ಹಜ್ ಯಾತ್ರಿಕರು ಈ ನಡುವೆ ಪ್ರಯಾಣದ ಸಂಧರ್ಭದಲ್ಲಿ ಸಾವನ್ನಪ್ಪಿದ್ದಾರೆ. ಪದೇ ಪದೇ ಯಾತ್ರಿಕರು ಭಯಂಕರ ಬಿಸಿಲಿನ ಕಾರಣಕ್ಕೆ ಸಾವಿಗೀಡಾಗುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ.
ಹೀಗೆ ಹಜ್ ಯಾತ್ರೆಯ ವೇಳೆ ಸಾವನ್ನಪ್ಪಿತ ಯಾತ್ರಿಕರಲ್ಲಿ ಬಹುತೇಕರು ಮಲೇಶಿಯಾ, ಇಂಡೋನೇಶಿಯಾ, ಜೋರ್ಡಾನ್, ಪಾಕಿಸ್ತಾನ, ಟ್ಯುನೀಶಿಯಾ ಹಾಗೂ ಇರಾನ್ ದೇಶದವರಾಗಿದ್ದಾರೆ.