ಹುಡುಕಿ

ಪ್ರಪ್ರಥಮ ಮಹಿಳಾ ಅಧ್ಯಕ್ಷರನ್ನು ಚುನಾಯಿಸಿದ ಮೆಕ್ಸಿಕೋ ಜನತೆ

ಕ್ಲಾಡಿಯ ಶೌನ್ಬಾಮ್ ಅವರು ಮೆಕ್ಸಿಕೋ ದೇಶದ ಸಾರ್ವತ್ರಿಕ ಚುನಾವಣೆಯನ್ನು ಗೆದ್ದಿದ್ದು, ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದೇಶದ ಮಹಿಳಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವರದಿ: ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್

ಮೆಕ್ಸಿಕೋ ದೇಶದ ಚುನಾವಣಾ ಸಮಿತಿಯ ಪ್ರಕಾರ ಕ್ಲಾಡಿಯ ಶೌನ್ಬಾಮ್ ಅವರು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದು, ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶೇಕಡ 58 ರಿಂದ 60ರಷ್ಟು ಮತಗಳನ್ನು ಪಡೆಯುವ ಮೂಲಕ ಇವರು ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಅವರ ಪ್ರತಿಸ್ಪರ್ಧಿಯಾಗಿದ್ದ ಗ್ಯಾಲರಿಸ್ ಅವರು ಈಗಾಗಲೇ ನೂತನ ಅಧ್ಯಕ್ಷರಿಗೆ ಕರೆ ಮಾಡಿ ಶುಭಾಶಯಗಳು ಕೋರಿದ್ದಾರೆ. ಇವರು ಹಲವು ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದು, ತಂತ್ರಜ್ಞಾನ ಪರಿಣಿತರಾಗಿದ್ದಾರೆ.

ಮೆಕ್ಸಿಕೋ ದೇಶದ ನೂತನ ನಿಯೋಜಿತ ಅಧ್ಯಕ್ಷೆ ಕ್ಲಾಡಿಯ ಶೌನ್ಬಾಮ್ ಅವರು ಎಡಪಕ್ಷಗಳ ಅಭ್ಯರ್ಥಿಯಾಗಿದ್ದರು.

ನೂತನ ಅಧ್ಯಕ್ಷರ ಅಧಿಕಾರವಧಿಯು ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಇವರು ಆರು ವರ್ಷಗಳ ಅವಧಿಗೆ ಮೆಕ್ಸಿಕೋ ದೇಶದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

"ಆರಂಭದಿಂದಲೇ ನಾನು ಹೇಳಿದ್ದೇನೆ. ಇದು ನನ್ನೊಬ್ಬಳ ಕೆಲಸವಲ್ಲ ಅಥವಾ ನಾನೊಬ್ಬಳ ಕುರಿತು ಅಲ್ಲ. ಇದು ನಮ್ಮೆಲ್ಲರಿಗೂ ಸಂಬಂಧಿಸಿದ್ದು. ಇದು ನಮ್ಮೆಲ್ಲರ ವಿಜಯ. ನಾನು ಎಂದಿಗೂ ನಿಮ್ಮ ಭರವಸೆಯನ್ನು ಹುಸಿ ಮಾಡುವುದಿಲ್ಲ." ಎಂದು ನೂತನ ಅಧ್ಯಕ್ಷೆ ಕ್ಲಾಡಿಯ ಶೌನ್ಬಾಮ್ ಅವರು ಹೇಳಿದ್ದಾರೆ.

03 June 2024, 17:28