ಹುಡುಕಿ

MEXICO-CRIME/JESUITS MEXICO-CRIME/JESUITS  (EDGARD GARRIDO)

ಮೆಕ್ಸಿಕೋದಲ್ಲಿ ಶಾಂತಿ ನೆಲೆಸಲು ಯೋಜನೆ

ರಾಷ್ಟ್ರೀಯ ಶಾಂತಿ ಸಂವಾದದ ಬಹುಮುಖ್ಯ ಮೂರನೇ ಹಂತವನ್ನು ಮೆಕ್ಸಿಕೋ ದೇಶದ ಧರ್ಮಾಧ್ಯಕ್ಷರ ಮಂಡಳಿಯು ಪ್ರತಿಪಾದಿಸಿದೆ. ಈ ಸಂವಾದವು ಅಪರಾಧಿಕ ಸಂಘಟನೆಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ ಹಾಗೂ ಕ್ರೌರ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಉದ್ದೇಶವನ್ನು ಹೊಂದಿದೆ.

ವರದಿ: ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್

ಎರಡು ವರ್ಷಗಳ ಹಿಂದೆ ಮೆಕ್ಸಿಕೋದಲ್ಲಿ ಅಪರಿಚಿತರು ಒಂದು ಚರ್ಚಿಗೆ ನುಗ್ಗಿ ವಯಸ್ಸಾದ ಇಬ್ಬರು ಜೆಸುಯಿಟ್ ಗುರುಗಳನ್ನು ಗುಂಡು ಹಾರಿಸಿ ಕೊಂದಿದ್ದರು. ಮೃತ ಹೊಂದಿದ ಗುರುಗಳ ಸ್ಮರಣಾರ್ಥ, ಮೆಕ್ಸಿಕೋ ಧರ್ಮಾಧ್ಯಕ್ಷರ ಮಂಡಳಿಯು ರಾಷ್ಟ್ರೀಯ ಶಾಂತಿ ಸಂವಾದವನ್ನು ಆರಂಭಿಸಿದೆ.

ರಾಷ್ಟ್ರೀಯ ಶಾಂತಿ ಸಂವಾದದ ಬಹುಮುಖ್ಯ ಮೂರನೇ ಹಂತವನ್ನು ಮೆಕ್ಸಿಕೋ ದೇಶದ ಧರ್ಮಾಧ್ಯಕ್ಷರ ಮಂಡಳಿಯು ಪ್ರತಿಪಾದಿಸಿದೆ. ಈ ಸಂವಾದವು ಅಪರಾಧಿಕ ಸಂಘಟನೆಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ ಹಾಗೂ ಕ್ರೌರ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಉದ್ದೇಶವನ್ನು ಹೊಂದಿದೆ.

ಜೆಸುಯಿಟ್ ಗುರುಗಳ ಈ ದಾರುಣ ಕೊಲೆಯು ದೇಶದಲ್ಲಿ ಸಂಚಲನವನ್ನುಂಟು ಮಾಡಿತ್ತು. ಇಡೀ ದೇಶವೇ ಈ ಕ್ರೌರ್ಯಕ್ಕೆ ಮನಮರುಗಿತ್ತು.

"ಈ ಇಬ್ಬರು ಹಿರಿಯ ಜೆಸುಯಿಟ್ ಗುರುಗಳ ಕೊಲೆಗಾರರು ಮೆಕ್ಸಿಕೋ ಇಡೀ ದೇಶವಾಗಿ ಇಂತಹ ಕೊಲೆಗಳು ಮುಂದೆ ನಡೆಯಲು ಬಿಡುವುದಿಲ್ಲ; ಎಲ್ಲರೂ ಒಗ್ಗಟ್ಟಿನಿಂದ ಇಂತಹ ಅಪರಾಧಗಳನ್ನು ತಡೆಯಲು ಹಾಗೂ ದೇಶವನ್ನು ಭಯಮುಕ್ತ ಹಾಗೂ ಅಪರಾಧಮುಕ್ತ ದೇಶವನ್ನಾಗಿಸಲು ಯೋಜಿಸಲು ಹಾಗೂ ಆ ಕುರಿತು ಕಾರ್ಯಪ್ರವೃತ್ತರಾಗಲು ಸದವಕಾಶವನ್ನು ನಿರ್ಮಿಸಿದ್ದಾರೆ." ಎಂದು ಮೆಕ್ಸಿಕನ್ ಧರ್ಮಾಧ್ಯಕ್ಷರುಗಳ ಮಂಡಳಿಯ ಪ್ರಕಟಣೆಯು ತಿಳಿಸಿದೆ.

21 June 2024, 18:23