ಹುಡುಕಿ

ಮಧ್ಯ ಪ್ರಾಚ್ಯದಲ್ಲಿ ಐದರಲ್ಲಿ ಮೂರು ಮಕ್ಕಳು ಗಂಭೀರ ಆಹಾರ ಬಡತನದಿಂದ ನರಳುತ್ತಿದ್ದಾರೆ

ಇತ್ತೀಚಿಗಷ್ಟೇ ಬಿಡುಗಡೆಯಾದ ವಿಶ್ವಸಂಸ್ಥೆಯ ಯುನಿಸೆಫ್ ವರದಿ ಎಂದು ಮಧ್ಯ ಪ್ರಾಚ್ಯದಲ್ಲಿ ಹಾಗೂ ಉತ್ತರ ಆಫ್ರಿಕಾದಲ್ಲಿ 5 ವರ್ಷದೊಳಗಿನ 34 ಮಿಲಿಯನ್ ಮಕ್ಕಳು ಗಂಭೀರ ಆಹಾರ ಬಡತನದಿಂದ ನರಳುತ್ತಿದ್ದಾರೆ ಎಂದು ಹೇಳಿದೆ.

ವರದಿ: ಜೆಸ್ಸಿಕಾ ಜಯಮರಿದಾಸ್, ಅಜಯ್ ಕುಮಾರ್

ಮಧ್ಯ ಪ್ರಾಚ್ಯದಲ್ಲಿ ಐದರಲ್ಲಿ ಮೂರು ಮಕ್ಕಳು, ಅಂದರೆ ಸುಮಾರು 34 ಮಿಲಿಯನ್ ಮಕ್ಕಳು ಗಂಭೀರ ಆಹಾರ ಬಡತನದಿಂದ ನರಳುತ್ತಿದ್ದಾರೆ.

"ಮಕ್ಕಳ ಆಹಾರ ಬಡತನ: ಬಾಲ್ಯದಲ್ಲಿ ಪೌಷ್ಟಿಕಾಂಶ ಕೊರತೆ" ಎಂಬ ಹೆಸರಿನ ವರದಿಯನ್ನು ಪ್ರಕಟಿಸಿರುವ ವಿಶ್ವಸಂಸ್ಥೆಯ ಯೂನಿಸೆಫ್, ಉತ್ತರ ಆಫ್ರಿಕಾ ದೇಶಗಳು ಸೇರಿದಂತೆ ಮಧ್ಯಪೂರ್ವ ದೇಶಗಳಲ್ಲಿ ಸುಮಾರು 34 ಮಿಲಿಯನ್ ಮಕ್ಕಳು ಗಂಭೀರ ಆಹಾರ ಬಡತನದಿಂದ ನರಳುತ್ತಿದ್ದಾರೆ ಎಂದು ವರದಿ ಮಾಡಿದೆ.

ಮುಂದುವರೆದು, ಅಂಕಿ ಅಂಶಗಳನ್ನು ಪ್ರಕಟಿಸಿರುವ ಈ ವರದಿಯು ಪ್ರಪಂಚದಾದ್ಯಂತ ಸುಮಾರು 181 ಮಿಲಿಯನ್ ಮಕ್ಕಳು ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳು ಗಂಭೀರ ಆಹಾರ ಬಡತನದಿಂದ ನರಳುತ್ತಿದ್ದಾರೆ ಎಂದು ಹೇಳಿದೆ. ಇವರಲ್ಲಿ ಸುಮಾರು 50 ಪ್ರತಿಶತ ಮಕ್ಕಳು ಗಂಭೀರ ಪೌಷ್ಟಿಕಾಂಶ ಕೊರತೆಯನ್ನು ಅನುಭವಿಸಿ, ಸಾವಿನಂತಹ ಪರಿಸ್ಥಿತಿಗೆ ಬಲಿಯಾಗುತ್ತಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ಆರ್ಥಿಕ ದುಷ್ಪರಿಣಾಮಗಳು, ಯುದ್ಧಗಳು ಹಾಗೂ ಅನಿಶ್ಚಿತತೆಗಳು ಇದಕ್ಕೆ ಪ್ರಮುಖ ಕಾರಣ ಎಂದು ಈ ವರದಿ ಅಂದಾಜಿಸಿದೆ. ಯೂನಿಸೆಫ್ ವರದಿಯ ಪ್ರಕಾರ ಶೇಕಡ ಹತ್ತಕ್ಕಿಂತ ಕಡಿಮೆ ಪ್ರತಿಶತ ಮಕ್ಕಳು ಹಣ್ಣುಗಳು ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಾರೆ. ಪ್ರತಿದಿನ ಕೇವಲ ಅನ್ನ ಮತ್ತು ಹಾಲನ್ನು ಮಾತ್ರ ಸೇವಿಸುವ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುವ ಸಂಭವ ಹೆಚ್ಚಿದೆ ಎಂದು ಇದು ವರದಿ ಮಾಡಿದೆ.

07 June 2024, 18:25