ಹುಡುಕಿ

ಸುಡಾನ್ ದೇಶದಲ್ಲಿ ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಗೌರವ ನೀಡಬೇಕಿದೆ

ಸುಡಾನ್ ದೇಶದಲ್ಲಿರುವ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ವಕ್ತಾರರು ವ್ಯಾಟಿಕನ್ ನ್ಯೂಸ್'ನೊಂದಿಗೆ ಮಾತನಾಡುತ್ತಾ ವಿಶ್ವದ ಅತ್ಯಂತ ಹಿಂದುಳಿದ ದೇಶವಾಗಿರುವ ಸುಡಾನ್ ದೇಶಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಮಾನವೀಯ ನೆರವು ಬೇಕಾಗಿದೆ ಎಂದು ಹೇಳುತ್ತಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

"ತಮ್ಮ ದಿನನಿತ್ಯದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲೂ ಸಹ ಹೆಣಗುತ್ತಿರುವ ಸುಡಾನೀಸ್ ಜನತೆಗೆ ಅಂತರಾಷ್ಟ್ರೀಯ ಸಮುದಾಯವು ಹೆಚ್ಚಿನ ನೆರವನ್ನು ನೀಡಬೇಕಿದೆ" ಎಂದು ಸುಡಾನಿನ ರೆಡ್ ಕ್ರಾಸ್ ಸಂಸ್ಥೆಯ ಅಂತರಾಷ್ಟ್ರೀಯ ವಕ್ತಾರರಾದ ಅಡ್ನಾನ್ ಹೆಜಾಮ್ ಅವರು ವ್ಯಾಟಿಕನ್ ನ್ಯೂಸ್'ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. 

ಸುಡಾನ್ ದೇಶದಲ್ಲಿ ಹಿಂದೆಂದಿಗಿಂತಲೂ ದೊಡ್ಡದಾದ ಮಾನವೀಯ ಭಿಕ್ಕಟ್ಟು ಏರ್ಪಟ್ಟಿದ್ದು, ಇದರಿಂದ ಸುಮಾರು ಹತ್ತು ಮಿಲಿಯನ್ ಜನರು ನಿರ್ಗತಿಕರಾಗಿದ್ದಾರೆ. ಇಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲೂ ಸಹ ಜನರು ಭೀಕರವಾಗಿ ಹೆಣಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಡಾನ್ ದೇಶದ ಸುಮಾರು ಇಪ್ಪತ್ತೈದು ಮಿಲಿಯನ್ ಜನರಿಗೆ ಅಂದರೆ ದೇಶದ ಅರ್ಧದಷ್ಟು ಜನರಿಗೆ ತುರ್ತು ಮಾನವೀಯ ನೆರವಿನ ಅವಶ್ಯಕತೆ ಇದೆ. ಪ್ರತಿ ನಿತ್ಯ ಹದಿನೇಳು ಮಿಲಿಯನ್ ಜನರು ಉಪವಾಸದಿಂದ ನರಳುತ್ತಿದ್ದಾರೆ. ದೇಶದ ಸುಮಾರು ಅರವತ್ತೈದರಷ್ಟು ಜನರಿಗೆ ಆರೋಗ್ಯ ಕ್ಷೇತ್ರಕ್ಕೆ ಪ್ರವೇಶಿಕೆ ಇಲ್ಲದಂತಾಗಿದೆ. ಸುಮಾರು ಐದು ಪರ್ಸೆಂಟ್'ನಷ್ಟು ಜನರಿಗೆ ಗಂಭೀರ ಉಪವಾಸದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. 

ವ್ಯಾಟಿಕನ್ ನ್ಯೂಸ್'ಗೆ ನೀಡಿರುವ ಸಂದರ್ಶನದಲ್ಲಿ ಅಡ್ನಾನ್ ಹೆಜಾಮ್ ಅವರು ಪ್ರಸ್ತುತ ಸುಡಾನ್ ದೇಶವು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಮಾತನಾಡಿದ್ದಾರೆ. 

18 June 2024, 16:29