ಇಂದು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಿದ ಬ್ರಿಟನ್ ಪ್ರಜೆಗಳು
ವರದಿ: ಸೂಸಿ ಹಾಡ್ಜಸ್, ಅಜಯ್ ಕುಮಾರ್
ಪ್ರಸ್ತುತ ಜೂನ್ ೪ ರಂದು ಯುನೈಟೆಡ್ ಕಿಂಗ್ಡಮ್ ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು, ೧೪ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರ ಬದಲಾಗುವ ಸಾಧ್ಯತೆಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಎಲ್ಲಾ ಕಥೋಲಿಕರಿಗೆ ಸಾಮಾನ್ಯ ಒಳಿತಿಗಾಗಿ ಮತದಾನ ಮಾಡುವಂತೆ ಕಥೋಲಿಕ ಸಂಸ್ಥೆಗಳ ಸಮೂಹವು ಪ್ರೇರೇಪಿಸುತ್ತಿದೆ.
ಲೇಬರ್ ಪಾರ್ಟಿಯ ಕೀರ್ ಕ್ರಾಮರ್ ಅವರು ವಿಜೇತರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ವರದಿಯಾಗಿದೆ.
ಪ್ರಸ್ತುತ ಚುನಾವಣೆಗಳಲ್ಲಿ, ಪ್ರಚಾರಗಳು ಸ್ಥಳೀಯ ಬಡತನ ಹಾಗೂ ಅಂತರಾಷ್ಟ್ರೀಯ ವಿಷಯಗಳು ಪ್ರಮುಖ ವಿಷಯಗಳಾಗಿವೆ. ಈ ಕುರಿತು ಸೂಕ್ತವಾಗಿ ಅವಲೋಕಿಸ ಮತ ಹಾಕಬೇಕೆಂದು ವಿವಿಧ ಕಥೋಲಿಕ ಸಂಸ್ಥೆಗಳು ಹಾಗೂ ಪ್ರಾಧಿಕಾರಗಳು ಕಥೋಲಿಕರಿಗೆ ಮನವಿಯನ್ನು ಮಾಡುತ್ತಿವೆ.
ಇದರ ಜೊತೆಗೆ ಹವಾಮಾನ ಬದಲಾವಣೆ ಹಾಗೂ ರಾಜಕೀಯ ಪ್ರಾಮುಖ್ಯತೆಯೂ ಸೇರಿ ಚುನಾವಣಾ ಕಣಕ್ಕೆ ರಂಗೇರಿದೆ. ಪ್ರಸ್ತುತ ಚುನಾವಣೆಗಳ ಕೇಂದ್ರಬಿಂದು ಯುವ ಮತದಾರರಾಗಿದ್ದಾರೆ ಎಂಬುದು ಎಲ್ಲರ ಸಾಮಾನ್ಯ ಗ್ರಹಿಕೆಯಾಗಿದೆ.