ಹೆಚ್ಚಿದ ತಾಪಮಾನ; ಯೂರೋಪ್, ಮಧ್ಯ ಏಷ್ಯಾದಲ್ಲಿ ಸುಮಾರು 400 ಮಕ್ಕಳ ಮರಣ
ವಿಶ್ವಸಂಸ್ಥೆಯ ಮಕ್ಕಳ ನಿಧಿಯಾದ ಯೂನಿಸೆಫ್ ನೀಡಿರುವ ವರದಿಯ ಪ್ರಕಾರ ಹೆಚ್ಚಿದ ತಾಪಮಾನದ ಪರಿಣಾಮ ಯೂರೋಪ್ ಹಾಗೂ ಮಧ್ಯ ಏಷ್ಯಾ ಖಂಡದಾದ್ಯಂತ ಸುಮಾರು 400 ಮಕ್ಕಳು ಮೃತ ಹೊಂದಿದ್ದಾರೆ.
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ವಿಶ್ವಸಂಸ್ಥೆಯ ಮಕ್ಕಳ ನಿಧಿಯಾದ ಯೂನಿಸೆಫ್ ನೀಡಿರುವ ವರದಿಯ ಪ್ರಕಾರ ಹೆಚ್ಚಿದ ತಾಪಮಾನದ ಪರಿಣಾಮ ಯೂರೋಪ್ ಹಾಗೂ ಮಧ್ಯ ಏಷ್ಯಾ ಖಂಡದಾದ್ಯಂತ ಸುಮಾರು 400 ಮಕ್ಕಳು ಮೃತ ಹೊಂದಿದ್ದಾರೆ.
೨೦೨೧ ರಲ್ಲೇ ಸುಮಾರು ೩೭೭ ಮಕ್ಕಳು ವಾತಾವರಣದಲ್ಲಿ ಉಂಟಾದ ತೀವ್ರ ತಾಪಮಾನದ ಪರಿಣಾಮವಾಗಿ ಅಸು ನೀಗಿದ್ದಾರೆ. ಹವಾಮಾನ ವೈಪರಿತ್ಯ, ಪ್ರಾಕೃತಿಕ ವಿಕೋಪಗಳಿಂದಲೂ ಸಹ ಮಕ್ಕಳು ಸಾವನ್ನಪ್ಪಿದ್ದಾರೆ.
ಆದರೆ ಈ ವರ್ಷದಲ್ಲಿ ಬೇಸಿಗೆಕಾಲದಲ್ಲಿ ಹೆಚ್ಚಿನ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಯುನೆಸ್ಕೋ ವರದಿಯು ಹೇಳಿದೆ.
24 July 2024, 17:48