ಸಾರ್ವತ್ರಿಕ ಚುನಾವಣೆ: ಫ್ರೆಂಚ್ ಅಧ್ಯಕ್ಷರಿಗೆ ಹಿನ್ನೆಡೆ; ನ್ಯಾಷನಲ್ ರ್ಯಾಲಿ ಪಕ್ಷದ ಲೆ ಪೆನ್'ಗೆ ಮೊದಲ ಸುತ್ತಿನ ಗೆಲುವು
ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧ್ಯಕ್ಷ ಇಮ್ಯಾನುವೇಲ್ ಮಾಕ್ರೋನ್ ಅವರ ಪಕ್ಷದ ಸದಸ್ಯರು ಮೊದಲ ಸುತ್ತಿನಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿದ್ದು, ವಲಸಿಗ ವಿರೋಧಿ ನೀತಿಯನ್ನು ಹೊಂದಿರುವ ನ್ಯಾಷನಲ್ ರ್ಯಾಲಿ ಪಕ್ಷದ ಮರೀನೆ ಲೆ ಪೆನ್ ಅವರು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ವರದಿ: ಸ್ಟೆಫಾನ್ ಜೆ. ಬೊಸ್, ಅಜಯ್ ಕುಮಾರ್
ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧ್ಯಕ್ಷ ಇಮ್ಯಾನುವೇಲ್ ಮಾಕ್ರೋನ್ ಅವರ ಪಕ್ಷದ ಸದಸ್ಯರು ಮೊದಲ ಸುತ್ತಿನಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿದ್ದು, ವಲಸಿಗ ವಿರೋಧಿ ನೀತಿಯನ್ನು ಹೊಂದಿರುವ ನ್ಯಾಷನಲ್ ರ್ಯಾಲಿ ಪಕ್ಷದ ಮರೀನೆ ಲೆ ಪೆನ್ ಅವರು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ಫಲಿತಾಂಶಗಳು ನ್ಯಾಷನಲ್ ರ್ಯಾಲಿ ಪಕ್ಷವು ಸುಮಾರು ೩೩% ಮತಗಳನ್ನು ಪಡೆದಿದೆ ಎಂದು ತೋರಿಸಿವೆ.
ಅದಾಗ್ಯೂ, ಚುನಾವಣಾ ವಿಶ್ಲೇಷಕರ ಪ್ರಕಾರ ಇದು ಮೊದಲ ಸುತ್ತು ಮಾತ್ರವೇ ಅಗಿದ್ದು, ಮುಂದಿನ ಸುತ್ತುಗಳಲ್ಲಿ ಫಲಿತಾಂಶ ಏರುಪೇರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದ್ದಾರೆ.
01 July 2024, 17:38