ಹೈಟಿ ದೇಶಕ್ಕೆ ಆಗಮಿಸಿದ ಮತ್ತಷ್ಟು ಕೆನ್ಯಾ ದೇಶದ ಪೊಲೀಸರು

ಹೈಟಿ ದೇಶದಲ್ಲಿ ಉಂಟಾಗಿರುವ ಕಾನೂನು ರಹಿತ ಸನ್ನಿವೇಶವನ್ನು ನಿಯಂತ್ರಣಕ್ಕೆ ತರಲು ಕೆನ್ಯಾ ದೇಶದಿಂದ ಈಗಾಗಲೇ ಹಲವು ಪೊಲೀಸ್ ಪಡೆಗಳು ಬಂದು ಕಾರ್ಯನಿರ್ವಹಿಸುತ್ತಿದೆ. ಮತ್ತೀಗ ಎರಡನೇ ಬಾರಿಗೆ ಮತ್ತಷ್ಟು ಪೊಲೀಸ್ ಪಡೆಗಳು ಈ ದೇಶಕ್ಕೆ ಆಗಮಿಸಿದ್ದು ಇಲ್ಲಿನ ಕಾನೂನುಬಾಹಿರತೆ ಹಾಗೂ ಅಪರಾಧ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ.

ವರದಿ: ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್

ಹೈಟಿ ದೇಶದಲ್ಲಿ ಕ್ರಿಮಿನಲ್ ಗ್ಯಾಂಗ್ಗಳ ಅಪರಾಧಿಕ ಚಟುವಟಿಕೆಗಳು ದಿನೇ ದಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಈ ಕ್ರಿಮಿನಲ್ ಗುಂಪುಗಳು ಶಸ್ತ್ರಾಸ್ತ್ರಗಳು ದೇಶದ ರಾಜಧಾನಿಯಲ್ಲಿ ಶೇಕಡ 80ರಷ್ಟು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ, ಕನ್ಯಾ ದೇಶದಿಂದ ಸುಮಾರು 400 ಜನ ಪೊಲೀಸರು ಬಂದಿದ್ದು ಇಲ್ಲಿನ ಅಪರಾಧಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ.

ಇಲ್ಲಿನ ಅಧಿಕಾರಿಗಳು ಹಾಗೂ ರಾಜಕಾರಣಿಗಳು ದೇಶದಲ್ಲಿ ಉಂಟಾಗಿರುವ ಕಾನೂನುಬಾಹಿರತೆ ಹಾಗೂ ಕ್ರಿಮಿನಲ್ ಚಟುವಟಿಕೆಗಳ ಹೆಚ್ಚಳದ ಕುರಿತು ಮೌನವನ್ನು ವಹಿಸಿದ್ದಾರೆ. ಇವರು ಕೇವಲ ಸರ್ಕಾರಿ ಕಟ್ಟಡಗಳು ಹಾಗೂ ವಿಮಾನ ನಿಲ್ದಾಣವನ್ನು ರಕ್ಷಿಸುತ್ತಿದ್ದಾರೆ. ಈ ವಿಮಾನ ನಿಲ್ದಾಣವು ಇತ್ತೀಚಿಗಷ್ಟೇ ಅಂದರೆ ಮೇ ತಿಂಗಳಲ್ಲಿ ಪುನಹ ತೆರೆದಿದೆ. ಇದಕ್ಕೂ ಮುಂಚಿತವಾಗಿ ಸ್ಥಳೀಯ ಕ್ರಿಮಿನಲ್ ಗ್ಯಾಂಗ್ ಗಳು ಇದನ್ನು ಆವರಿಸಿಕೊಂಡ ಪರಿಣಾಮ ಮೂರು ತಿಂಗಳು ಇಲ್ಲಿ ಯಾವುದೇ ಕಾರ್ಯಾಚರಣೆಯು ನಡೆದಿರುವುದಿಲ್ಲ.

ಪ್ರಸ್ತುತ ದೇಶದಲ್ಲಿ ಉಂಟಾಗಿರುವ ಕ್ರಿಮಿನಲ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಮತ್ತಷ್ಟು ಪೊಲೀಸ್ ಪಡೆಗಳು ಐಟಿ ದೇಶಕ್ಕೆ ಆಗಮಿಸಲಿವೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಹೈಟಿಯ ನೆರೆಯ ದೇಶಗಳು ಸಹ ದೇಶವನ್ನು ಮತ್ತೆ ಕಾನೂನಿನ ಅಡಿಗೆ ತರಲು ಸಹಕಾರವನ್ನು ನೀಡಲು ಎಂದು ತಿಳಿದು ಬಂದಿದೆ.

17 July 2024, 17:57