ಹುಡುಕಿ

ಪ್ಯಾಲೆಸ್ತೀನ್ ಪ್ರದೇಶಗಳ ಇಸ್ರೇಲಿ ಆಕ್ರಮಣ ಕಾನೂನುಬಾಹಿರ: ಅಂತರಾಷ್ಟ್ರೀಯ ನ್ಯಾಯಾಲಯ

ಪ್ಯಾಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ ಎಂದು ಶನಿವಾರ ಅಂತರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ತೀರ್ಪನ್ನು ನೀಡಿದೆ. ಈಗಾಗಲೇ ತಾನು ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಮತ್ತೆ ಪ್ಯಾಲೆಸ್ತೀನ್ ದೇಶಕ್ಕೆ ಬಿಟ್ಟುಕೊಡುವಂತೆ ಇಸ್ರೇಲ್ ದೇಶಕ್ಕೆ ನ್ಯಾಯಾಲಯವು ತಾಕೀತು ಮಾಡಿದೆ.

ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್

ಪ್ಯಾಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ ಎಂದು ಶನಿವಾರ ಅಂತರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ತೀರ್ಪನ್ನು ನೀಡಿದೆ. ಈಗಾಗಲೇ ತಾನು ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಮತ್ತೆ ಪ್ಯಾಲೆಸ್ತೀನ್ ದೇಶಕ್ಕೆ ಬಿಟ್ಟುಕೊಡುವಂತೆ ಇಸ್ರೇಲ್ ದೇಶಕ್ಕೆ ನ್ಯಾಯಾಲಯವು ತಾಕೀತು ಮಾಡಿದೆ.

ಗಾಝಾ ಪ್ರದೇಶದಲ್ಲಿ ಯುದ್ಧದ ಪರಿಣಾಮ ದಿನೇ ದಿನೇ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ರೀತಿಯಾಗಿ ಹೇಳಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಕಲಾಪವನ್ನು ನಡೆಸುತ್ತಾ ಮಾತನಾಡಿದ ಅಂತರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ನವಾಫ್ ಸಲಾಮ್ ಅವರು ಪ್ಯಾಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ದೇಶವು ಪ್ಯಾಲೆಸ್ತೀನ್ ದೇಶದ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಕಾನೂನುಬಾಹಿರವಾಗಿದ್ದು, ಕೂಡಲೇ ಅಲ್ಲಿಂದ ತಮ್ಮ ಇರುವಿಕೆಯನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯವು ಹೇಳಿದೆ.  

20 July 2024, 19:15