ಇರಾನ್ ದೇಶದ ನೂತನ ಅಧ್ಯಕ್ಷರಾಗಿ ಮಸೂದ್ ಪೆಜೆಸ್ಕಿಯನ್ ಆಯ್ಕೆ

ಇರಾನ್ ದೇಶದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ "ಸಾಧಾರಣ" ಎಂದೇ ಪ್ರಸಿದ್ಧಿಯಾಗಿರುವ ಮಸೂದ್ ಪೆಜೆಷ್ಕಿಯನ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್

ಇರಾನ್ ದೇಶದಲ್ಲಿ "ಸಾಧಾರಣ" ಎಂದೇ ಪ್ರಸಿದ್ಧಿಯಾಗಿರುವ ಮಸೂದ್ ಪೆಜೆಷ್ಕಿಯನ್ ಅವರು ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದು, ಇರಾನಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅವರು ಇರಾನ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಎರಡನೇ ಹಂತದ ಚುನಾವಣೆಯಲ್ಲಿ ಪೆಜೆಷ್ಕಿಯನ್ ಹಾಗೂ ಸಯೀದ್ ಜಲೀಲ್ ಎಂಬವರ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಪೆಜೆಷ್ಕಿಯನ್ ಅಂತಿಮವಾಗಿ ಜಯಗಳಿಸಿದ್ದಾರೆ ಎಂದು ವರದಿಯಾಗಿದೆ.

೬೯ ವರ್ಷದ ಪೆಜೆಷ್ಕಿಯನ್ ರಾಜಕಾರಣಕ್ಕೆ ಹೊಸಬರಲ್ಲ. ವೃತ್ತಿಯಿಂದ ಹಾರ್ಟ್ ಸರ್ಜನ್ ಆಗಿರುವ ಇವರು, ಇರಾನ್ ಸಂಸತ್ತಿನ ಉಪ ಸ್ಪೀಕರ್ ಆಗಿಯೂ ಸಹ ಕಾರ್ಯನಿರ್ವಹಿಸಿದ್ದರು.   

06 July 2024, 18:02