ಹುಡುಕಿ

ಮರೋನೈಟ್ ಬಿಷಪ್: ಜನರು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದಾರೆ, ನೆರವಾಗುತ್ತಿದ್ದಾರೆ

ಲೆಬಾನನ್ನಿನ ಬರ್ಟ್ರೌನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಪ್ರಸ್ತುತ ಲೆಬಾನನ್ ದೇಶದಲ್ಲಿ ಉದ್ವಿಗ್ನಗೊಳ್ಳುತ್ತಿರುವ ಇಸ್ರೇಲ್ ಹಾಗೂ ಹೆಜಾಬೊಲ್ಲಾ ಶಸ್ತ್ರಸಜ್ಜಿತ ಗುಂಪುಗಳ ನಡುವಿನ ಸಂಘರ್ಷದ ನಡುವೆ ಜನರು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದಾರೆ ಹಾಗೂ ಇಲ್ಲಿನ ಜನತೆಗೆ ಸಹಾಯ ಮಾಡುತ್ತಿದ್ದಾರೆ ಎಂದು ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವರದಿ: ಮಾರ್ಕೋ ಗೆರ್ರಾ, ಅಜಯ್ ಕುಮಾರ್

ಲೆಬಾನನ್ನಿನ ಬರ್ಟ್ರೌನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಪ್ರಸ್ತುತ ಲೆಬಾನನ್ ದೇಶದಲ್ಲಿ ಉದ್ವಿಗ್ನಗೊಳ್ಳುತ್ತಿರುವ ಇಸ್ರೇಲ್ ಹಾಗೂ ಹೆಜಾಬೊಲ್ಲಾ ಶಸ್ತ್ರಸಜ್ಜಿತ ಗುಂಪುಗಳ ನಡುವಿನ ಸಂಘರ್ಷದ ನಡುವೆ ಜನರು ಶಾಂತಿಗಾಗಿ ಪ್ರಾರ್ಥಿಸುತ್ತಿದ್ದಾರೆ ಹಾಗೂ ಇಲ್ಲಿನ ಜನತೆಗೆ ಸಹಾಯ ಮಾಡುತ್ತಿದ್ದಾರೆ ಎಂದು ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಇಸ್ರೇಲ್ ಮೇಲೆ ಇಲ್ಲಿನ ಶಸ್ತ್ರಸಜ್ಜಿತ ಗುಂಪುಗಳು ಡ್ರೋನ್ ದಾಳಿಯನ್ನು ನಡೆಸಲು ಯತ್ನಿಸಿವೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

ಇಲ್ಲಿನ ಕ್ರೈಸ್ತ ಜನತೆ ದೇಶದಲ್ಲಿ ಶಾಂತಿ ನೆಲೆಸಲು ಸದಾ ಪ್ರಾರ್ಥಿಸುತ್ತಿದ್ದು, ಈ ದೇಶದಿಂದ ವಲಸೆ ಹೋಗುವ ಹಾಗೂ ಸಂಭಾವಿತ ಯುದ್ಧ ಪ್ರದೇಶದಿಂದ ಓಡಿಹೋಗುವವರೆಗೆ ಬೇಕಾದ ನೆರವನ್ನು ನೀಡುತ್ತಿದ್ದು, ಈವರೆಗೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಪಲಾಯನಮಾಡಲು ಸಹಾಯವನ್ನು ನೀಡಿದೆ ಎಂದು ಧರ್ಮಾಧ್ಯಕ್ಷರು ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

24 July 2024, 16:11