ಹುಡುಕಿ

ಒಲಂಪಿಕ್ ಕ್ರೀಡಾಪಟುಗಳಿಗೆ ಅವರ ಜವಾಬ್ದಾರಿಯ ಕುರಿತು ನೆನಪಿಸಿದ ಅಥ್ಲೆಟಿಕಾ ವ್ಯಾಟಿಕಾನ

ಪ್ಯಾರೀಸ್ ನಗರದಲ್ಲಿ ನಡೆಯಲಿರುವ ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ವ್ಯಾಟಿಕನ್ನಿನ ಕ್ರೀಡಾ ಸಂಸ್ಥೆಯಾದ ಅಥ್ಲೆಟಿಕಾ ವ್ಯಾಟಿಕಾನಾವು ಕ್ರೀಡಾಸ್ಪೂರ್ತಿ ಹಾಗೂ ಅವರ ಜವಾಬ್ದಾರಿಯ ಕುರಿತು ಪತ್ರದ ಮುಖೇನ ತಿಳಿಸಿದೆ. ಒಲಂಪಿಕ್ ಸ್ಪರ್ದೆಗಳು ಶಾಂತಿಯನ್ನು ಉತ್ತೇಜಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಇತ್ತೀಚೆಗಷ್ಟೇ ಮನವಿ ಮಾಡಿದ್ದರು. ಪೋಪ್ ಫ್ರಾನ್ಸಿಸ್ ಅವರ ಈ ಮಾತುಗಳನ್ನು ಈ ಪತ್ರದಲ್ಲಿ ನೆನಪಿಸಲಾಗಿದೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಪ್ಯಾರೀಸ್ ನಗರದಲ್ಲಿ ನಡೆಯಲಿರುವ ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ವ್ಯಾಟಿಕನ್ನಿನ ಕ್ರೀಡಾ ಸಂಸ್ಥೆಯಾದ ಅಥ್ಲೆಟಿಕಾ ವ್ಯಾಟಿಕಾನಾವು ಕ್ರೀಡಾಸ್ಪೂರ್ತಿ ಹಾಗೂ ಅವರ ಜವಾಬ್ದಾರಿಯ ಕುರಿತು ಪತ್ರದ ಮುಖೇನ ತಿಳಿಸಿದೆ. ಒಲಂಪಿಕ್ ಸ್ಪರ್ದೆಗಳು ಶಾಂತಿಯನ್ನು ಉತ್ತೇಜಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಇತ್ತೀಚೆಗಷ್ಟೇ ಮನವಿ ಮಾಡಿದ್ದರು. ಪೋಪ್ ಫ್ರಾನ್ಸಿಸ್ ಅವರ ಈ ಮಾತುಗಳನ್ನು ಈ ಪತ್ರದಲ್ಲಿ ನೆನಪಿಸಲಾಗಿದೆ.

ಈ ವರ್ಷದ ಒಲಂಪಿಕ್ ಸ್ಪರ್ಧೆಗಳು ಯುದ್ಧಗಳ ನಡುವೆ ಆರಂಭವಾಗುತ್ತಿದೆ. ಈಗಾಗಲೇ ವಿಶ್ವದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಯುದ‌್ಧಗಳು ತಮ್ಮ ದೇಶಗಳಲ್ಲಿ ಮಾತ್ರವಲ್ಲದೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ವಿಶ್ವದ ಎಲ್ಲರ ಮೇಲೆಯೂ ಪರಿಣಾಮವನ್ನು ಬೀರಿದೆ. ಈ ಹೊತ್ತಿನಲ್ಲಿ ಪೋಪ್ ಫ್ರಾನ್ಸಿಸ್ ಅವರು ಕ್ರೀಡಾಪಟುಗಳಿಗೆ ನೀಡಿರುವ ಸಂಧಾನದ ಕರೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಪೋಪ್ ಫ್ರಾನ್ಸಿಸ್ ಅವರು ಒಲಂಪಿಕ್ ಸ್ಪರ್ಧೆಗಳು ಸಂಧಾನಕ್ಕೆ ಸದವಕಾಶವನ್ನು ಕಲ್ಪಿಸಬೇಕು ಎಂದು ಹೇಳುತ್ತಾ, ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿ ಮಾತ್ರವಲ್ಲದೆ ಶಾಂತಿಯನ್ನು ಉತ್ತೇಜಿಸಲು ಶ್ರಮಿಸಬೇಕು ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದರು. 

25 July 2024, 17:50