ಹುಡುಕಿ

ರವಾಂಡ ಸಾರ್ವತ್ರಿಕ ಚುನಾವಣೆಗಳು: ಕಗಾಮೆ ಮರು ಆಯ್ಕೆ ಬಹುತೇಕ ಖಚಿತ

ರವಾಂಡ ಪೆಟ್ರಿಯೋಟಿಕ್ ಫ್ರಂಟ್ ಪಕ್ಷದ ನಾಯಕ ಪೌಲ್ ಕಗಾಮೆ ಅವರು ಸೋಮವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತೆ ಗೆದ್ದು, ಎರಡನೇ ಬಾರಿಗೆ ದೇಶದ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ವರದಿ: ಲೀಸಾ ಝೇಂಗಾರೀನಿ, ಅಜಯ್ ಕುಮಾರ್

ರವಾಂಡ ಪೆಟ್ರಿಯೋಟಿಕ್ ಫ್ರಂಟ್ ಪಕ್ಷದ ನಾಯಕ ಪೌಲ್ ಕಗಾಮೆ ಅವರು ಸೋಮವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತೆ ಗೆದ್ದು, ಎರಡನೇ ಬಾರಿಗೆ ದೇಶದ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಸೋಮವಾರ ರವಾಂಡ ದೇಶದ ಜನತೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನವನ್ನು ಮಾಡಲು ಹೋಗುತ್ತಿದ್ದು ಮತ್ತೊಮ್ಮೆ ಇದೆ ಅಧ್ಯಕ್ಷರು ಪುನರ್ ಆಯ್ಕೆಯಾಗುವುದು ಖಚಿತವೆಂದು ಮಾಧ್ಯಮಗಳು ಅಭಿಪ್ರಾಯ ಪಡುತ್ತಿವೆ.

66 ವರ್ಷದ ಪೌಲ್ ಕಗ್ಗಾಮೆ 1994 ರಿಂದ ಅಧಿಕಾರದಲ್ಲಿದ್ದು ಸತತ ನಾಲ್ಕನೇ ಬಾರಿಗೆ ದೇಶದ ಅಧ್ಯಕ್ಷರಾಗುವ ದಾಪುಗ ನೀಡುತ್ತಿದ್ದಾರೆ. ಈಗಲೂ ಸಹ ದೊಡ್ಡ ಮಟ್ಟದ ಜನಬೆಂಬಲವನ್ನು ಹೊಂದಿರುವ ಇವರು, ದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಸದೃಢ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

15 July 2024, 19:08