ಶಾಂತಿಯನ್ನು ಉತ್ತೇಜಿಸಲಿರುವ ರಿಮಿನಿ ಸಭೆ 2024

2024 ರ ರಿಮಿನಿ ಸಭೆಯು ಏಡ್ರಿಯಾಟಿಕ್ ಸಮುದ್ರ ತೀರದಲ್ಲಿನ ಈ ಸುಂದರ ನಗರದಲ್ಲಿ ನಡೆಯಲಿದ್ದು, ಈ ಸಭೆಯನ್ನು ಆಗಸ್ಟ್ 20-25 ರವರೆಗೆ ಜೆರುಸಲೇಮಿನ ಪಿತೃ ಪ್ರಧಾನ (ಪೇಟ್ರಿಯಾರ್ಕ್) ರಾಗಿರುವ ಕಾರ್ಡಿನಲ್ ಪಿಯರ್ಬಟ್ಟಿಸ್ಟಾ ಪಿಝಾಬಲ್ಲಾ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಬಿಸಿನೆಸ್ ಕ್ಷೇತ್ರಗಳ ನಾಯಕರು ಹಾಗೂ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ವರದಿ: ಅಲೆಸಾಂದ್ರೊ ಗುವಾರೆಸ್ಕಿ, ಅಜಯ್ ಕುಮಾರ್

2024 ರ ರಿಮಿನಿ ಸಭೆಯು ಏಡ್ರಿಯಾಟಿಕ್ ಸಮುದ್ರ ತೀರದಲ್ಲಿನ ಈ ಸುಂದರ ನಗರದಲ್ಲಿ ನಡೆಯಲಿದ್ದು, ಈ ಸಭೆಯನ್ನು ಆಗಸ್ಟ್ 20-25 ರವರೆಗೆ ಜೆರುಸಲೇಮಿನ ಪಿತೃ ಪ್ರಧಾನ (ಪೇಟ್ರಿಯಾರ್ಕ್) ರಾಗಿರುವ ಕಾರ್ಡಿನಲ್ ಪಿಯರ್ಬಟ್ಟಿಸ್ಟಾ ಪಿಝಾಬಲ್ಲಾ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಬಿಸಿನೆಸ್ ಕ್ಷೇತ್ರಗಳ ನಾಯಕರು ಹಾಗೂ ವ್ಯಕ್ತಿಗಳು ಭಾಗವಹಿಸಲಿದ್ದಾರೆ.  

ವಾರ್ಷಿಕವಾಗಿ ನಡೆಯುವ ಈ ಸಭೆಯು ಈ ವರ್ಷ ನಡೆಯುತ್ತಿರುವ ೧೪೦ನೇ ಸಭೆಯಾಗಿದ್ದು, ಯುದ್ಧಗಳೇ ನಡೆದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಶಾಂತಿಯನ್ನು ಉತ್ತೇಜಿಸುವ ಉದ್ದೇಶ ಹಾಗೂ ಶೀರ್ಷಿಕೆಯೊಂದಿಗೆ ನಡೆಯುತ್ತಿದೆ. "ಇಂದು ನಾವು ಈ ಕುರಿತು ಕಾರ್ಯನಿರ್ವಹಿಸದಿದ್ದರೆ, ನಾಳೆ ಈ ಪರವಾಗಿ ದನಿಯೆತ್ತಲು ಯಾರೂ ಇರುವುದಿಲ್ಲ ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಭೆಯಲ್ಲಿ ಧರ್ಮಸಭೆಯ ನಾಯಕರು, ರಾಜಕೀಯ ನಾಯಕರು ಹಾಗೂ ವಿವಿಧ ಕಂಪನಿಗಳ ಮುಖ್ಯಸ್ಥರೂ ಸಹ ಸೇರಿದಂತೆ ಹಲವಾರು ಗಣ್ಯರು ಭಾಗವಹಿಲಿದ್ದಾರೆ ಎಂದು ವರದಿಯಾಗಿದೆ. ಇಟಲಿಯ ಬಹು ಸುಂದರ ನಗರಗಳಲ್ಲಿ ಒಂದಾದ ರಿಮಿನಿ ಕರಾವಳಿ ನಗರದಲ್ಲಿ ಈ ವರ್ಷದ ಈ ಸಭೆಯು ನಡೆಯುತ್ತಿದೆ.   

16 July 2024, 16:53