ಕೀವ್ ನಗರದ ಮಕ್ಕಳ ಆಸ್ಪತ್ರೆಯ ಮೇಲೆ ದಾಳಿ ಮಾಡಿದ ರಷ್ಯಾ
ರಷ್ಯಾ ಸೋಮವಾರ ಉಕ್ರೇನ್ ದೇಶದ ವಿವಿಧ ಪ್ರದೇಶದ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಒಂದು ಕ್ಷಿಪಣಿಯು ಕೀರ್ ನಗರದ ಮಕ್ಕಳ ಆಸ್ಪತ್ರೆಯ ಮೇಲೆ ಅಪ್ಪಳಿಸಿದ್ದು, ಇದರಿಂದ ಹಲವಾರು ಜನರು ಮೃತ ಹೊಂದಿದ್ದು, ನೂರಾರು ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್
ರಷ್ಯಾ ಸೋಮವಾರ ಉಕ್ರೇನ್ ದೇಶದ ವಿವಿಧ ಪ್ರದೇಶದ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಒಂದು ಕ್ಷಿಪಣಿಯು ಕೀರ್ ನಗರದ ಮಕ್ಕಳ ಆಸ್ಪತ್ರೆಯ ಮೇಲೆ ಅಪ್ಪಳಿಸಿದ್ದು, ಇದರಿಂದ ಹಲವಾರು ಜನರು ಮೃತ ಹೊಂದಿದ್ದು, ನೂರಾರು ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಈ ದಾಳಿಯ ಹಿನ್ನೆಲೆಯಲ್ಲಿ ಕುಸಿದು ಹೋದ ಆಸ್ಪತ್ರೆಯ ಒಂದು ಭಾಗದ ಅವಶೇಷಗಳ ನಡುವೆ ಸಿಲುಕಿದ್ದ ಜನರಿಗೆ ಹಾಗೂ ಮೃತ ದೇಹಗಳನ್ನು ಹೊರತೆಗೆಯಲು ಜನರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಇಲ್ಲಿ ಕಂಡು ಬಂದವು.
ಯುದ್ಧ ಆರಂಭಗೊಂಡ ನಂತರ ಎರಡು ವರ್ಷಗಳಲ್ಲೇ ನಡೆದ ಅತ್ಯಂತ ಭಯಾನಕ ದಾಳಿ ಇದಾಗಿದೆ ಎಂದು ನಗರದ ಮೇಯರ್ ಹೇಳಿಕೆ ನೀಡಿದ್ದಾರೆ. ಈ ದಾಳಿ ನಡೆದ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ನ್ಯಾಟೋ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.
08 July 2024, 17:43