ಹುಡುಕಿ

ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆಗೆ ಯತ್ನ; ಗಾಯಗೊಂಡ ಟ್ರಂಪ್

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಹತ್ಯೆ ಯತ್ನ ನಡೆದಿದೆ. ಇಂದು ಅವರು ಪೆನ್ಸಿಲ್ವೇನಿಯ ರಾಜ್ಯದಲ್ಲಿ ರಾಜಕೀಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದ ವೇಳೆ ಈ ಹತ್ಯೆಯತ್ನವು ನಡೆದಿದೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ  ಹತ್ಯೆ  ಯತ್ನ ನಡೆದಿದೆ. ಇಂದು ಅವರು ಪೆನ್ಸಿಲ್ವೇನಿಯ ರಾಜ್ಯದಲ್ಲಿ ರಾಜಕೀಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುತ್ತಿದ್ದ ವೇಳೆ ಈ  ಹತ್ಯೆಯತ್ನವು ನಡೆದಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಯೊಬ್ಬ ದಾಳಿ ನಡೆಸಿದ ಪರಿಣಾಮ ಅವರ  ಬಲ ಕಿವಿಗೆ ಗುಂಡೇಟು ತಗುಲಿ ತೀವ್ರ ರಕ್ತಸ್ರಾವ ಉಂಟಾಗಿದೆ.

ಸೀಕ್ರೆಟ್ ಸರ್ವಿಸ್ ಯೋಧರು ದುಷ್ಕರ್ಮಿಯನ್ನು ಕೊಂದು ಹಾಕಿದ್ದಾರೆ. ಈ ದಾಳಿಯಲ್ಲಿ ಸಾಮಾನ್ಯ ಪ್ರಜೆಯೊಬ್ಬ  ಸಾವನ್ನಪ್ಪಿರುವ ಘಟನೆಯು ಸಹ ನಡೆದಿದೆ. 

ಈ ಘಟನೆಯನ್ನು ಖಂಡಿಸಿರುವ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಧೈರ್ಯವನ್ನು ಹೇಳಿ ಅವರಿಗೋಸ್ಕರ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಅಮೆರಿಕಾದ ಜನತೆ ಒಂದೇ ದೇಶವಾಗಿ ಈ ರೀತಿಯ ಕೃತಿಗಳನ್ನು ಖಂಡಿಸಬೇಕು ಎಂದು ಸಹ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆಯನ್ನು ಖಂಡಿಸಿರುವ ಅಮೆರಿಕಾದ ಕಥೋಲಿಕ ಧರ್ಮಧ್ಯಕ್ಷರ ಮಂಡಳಿಯು ಟ್ರಂಪ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಕರೆ ನೀಡಿದೆ. ಯಾವುದೇ ನಿರ್ಧಾರಗಳು ತೆಗೆದುಕೊಂಡರು ಸಹ ಅವುಗಳ ಮೂಲತತ್ವವು ಶಾಂತಿಯಾಗಿರಬೇಕು. ಹಿಂಸೆ ಎಂದಿಗೂ ಒಂದು ಅವಕಾಶವಾಗಬಾರದು ಎಂದು ಹೇಳುವ ಮೂಲಕ ಅಮೆರಿಕಾದ ಮಾಜಿ ಅಧ್ಯಕ್ಷರ ಮೇಲೆ ನಡೆದಿರುವ ಈ ಹತ್ಯೆ ಪ್ರಯತ್ನವನ್ನು ಖಂಡಿಸಿದ್ದಾರೆ.

14 July 2024, 18:38