ಅಕ್ಟೋಬರ್'ನಿಂದ ಈವರೆಗೆ ಪಶ್ಚಿಮ ದಂಡೆಯಲ್ಲಿ ಸುಮಾರು 250% ಮಕ್ಕಳ ಸಾವುನೋವುಗಳು ಸಂಭವಿಸಿವೆ: ವಿಶ್ವಸಂಸ್ಥೆ
ಅಕ್ಟೋಬರ್ ತಿಂಗಳಿನಿಂದ ಈವರೆಗೂ ಪ್ಯಾಲೆಸ್ತೇನಿನ ಪಶ್ಚಿಮ ದಂಡೆಯಲ್ಲಿ ಯುದ್ಧದ ಪರಿಣಾಮ ಸುಮಾರು 250% ಮಕ್ಕಳ ಸಾವುನೋವುಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗವು ವರದಿ ಮಾಡಿದೆ.
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ಅಕ್ಟೋಬರ್ ತಿಂಗಳಿನಿಂದ ಈವರೆಗೂ ಪ್ಯಾಲೆಸ್ತೇನಿನ ಪಶ್ಚಿಮ ದಂಡೆಯಲ್ಲಿ ಯುದ್ಧದ ಪರಿಣಾಮ ಸುಮಾರು 250% ಮಕ್ಕಳ ಸಾವುನೋವುಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಆಯೋಗವು ವರದಿ ಮಾಡಿದೆ.
ಗಾಜಾ ಪ್ರದೇಶದಲ್ಲಿ ಮಾತ್ರ ಯುದ್ಧವು ನಡೆಯುತ್ತಿದೆ ಎಂದರೂ ಸಹ ಇದು ಪ್ಯಾಲೆಸ್ತೇನಿನ ಜನರ ಮೇಲೆ ದೊಡ್ಡ ಮಟ್ಟಿಗಿನ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯು ಗಮನಿಸಿದೆ.
ಈವರೆಗೂ ಒಟ್ಟಾರೆಯಾಗಿ ಸುಮಾರು ೧೫೦ ಕ್ಕೂ ಹೆಚ್ಚು ಮಕ್ಕಳ ಹತ್ಯೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯು ಗುರುತಿಸಿದೆ.
ಪೋಪ್ ಫ್ರಾನ್ಸಿಸ್ ಅವರು ಹಿಂಸೆಯನ್ನು ನಿಲ್ಲಿಸುವಂತೆ ವಿಶೇಷವಾಗಿ ಮಕ್ಕಳ ಮೇಲಿನ ಹಿಂಸೆಯನ್ನು ನಿಲ್ಲಿಸುವಂತೆ ಹಾಗೂ ಅವರನ್ನು ರಕ್ಷಿಸುವಂತೆ ಪದೇ ಪದೇ ಮನವಿ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಈಗಲೂ ಸಹ ಅವರು ಯುದ್ಧವನ್ನು ನಿಲ್ಲಿಸಲು ಮನವಿಗಳನ್ನು ಮಾಡುತ್ತಲೇ ಇದ್ದಾರೆ.
22 July 2024, 14:54