ಗಾಝಾ ಶಾಂತಿ ಒಪ್ಪಂದಕ್ಕೆ ಒತ್ತಾಯಿಸುತ್ತಿರುವ ಅಮೇರಿಕಾ
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಗಾಝಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಿ, ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕದನ ವಿರಾಮ ಘೋಷಿಸುವುದೂ ಸೇರಿದಂತೆ ಅಪಹರಣ ಹೊಂದಿರುವ ವ್ಯಕ್ತಿಗಳನ್ನು ಬಿಡುಗಡೆ ಮಾಡಬೇಕು ಎನ್ನುವ ಕುರಿತು ಮಾತುಕತೆಗಳ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಏನೇ ಆದರೂ ಶಾಂತಿ ಮಾತುಕತೆಗಳು ಫಲಪ್ರದವಾಗಲೇ ಬೇಕು ಎಂದು ಅಮೇರಿಕಾ ಹಮಾಸ್ ಹಾಗೂ ಇಸ್ರೇಲ್ ದೇಶಕ್ಕೆ ಒತ್ತಾಯಿಸಿದೆ.
ಪದೇ ಪದೇ ಇಸ್ರೇಲ್ ಗಾಜಪ್ರದೇಶದ ಮೇಲೆ ನಡೆಸುತ್ತಿರುವ ಕ್ಷಿಪಟಿ ದಾಳಿಗಳ ಹಿನ್ನೆಲೆಯಲ್ಲಿ, ಆ ಕುರಿತು ಮಾತನಾಡಿರುವ ಅಮೆರಿಕಾ ದೇಶವು ಗಾಜದಲ್ಲಿ ಶಾಂತಿ ಮಾತುಕತೆಗಳು ಮುಂದುವರೆಯಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.
ಆದರೆ ಹಮಾಸ್ ಈ ಮಾತುಕತೆಗಳ ಕುರಿತು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದು, ಇವು ಮುಂದುವರೆಯುತ್ತವೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಈ ವಿಷಯದಲ್ಲಿ ಅಮೇರಿಕಾವು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು, ಇಸ್ರೇಲ್ ಹಾಗೂ ಹಮಾಸ್ ನಡುವಿನ ಶಾಂತಿ ಮಾತುಕತೆಗಳಿಗೆ ಉತ್ತೇಜನವನ್ನು ನೀಡುವುದಾಗಿ ಹೇಳಿದೆ.