ಕತಾರ್ ದೇಶದಲ್ಲಿ ಗಾಝಾ ಕುರಿತು ಶಾಂತಿ ಮಾತುಕತೆಗಳು ಆರಂಭ
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಗಾಝಾದಲ್ಲಿ ಶಾಂತಿಯನ್ನು ಸ್ಥಾಪಿಸಲು ಹಾಗೂ ಯುದ್ಧ ಖೈದಿಗಳು ಹಾಗೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಸಲುವಾಗಿ ಕತಾರ್ ದೇಶದಲ್ಲಿ "ಭರವಸೆಯ" ಶಾಂತಿ ಮಾತುಕತೆಗಳು ನಡೆಯಲು ಆರಂಭಿಸಿವೆ ಎಂದು ಅಮೇರಿಕಾದ ವಾಷಿಂಗ್ಟನ್ ಹೇಳಿದೆ ಎಂದು ವರದಿಯಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಪದೇ ಪದೇ ಆಗುತ್ತಿರುವ ಹಿಂಸಾತ್ಮಕ ಕ್ರಮಗಳನ್ನು ಹಾಗೂ ಮುಗ್ದ ಜನರ ಸಾವು-ನೋವುಗಳನ್ನು ನಿಲ್ಲಿಸುವ ಸಲುವಾಗಿ ಶಾಂತಿ ಒಪ್ಪಂದಗಳು ಅಗತ್ಯವಾಗಿವೆ.
ಪದೇ ಪದೇ ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ರಾಜಕೀಯ ನಾಯಕರು, ಸಂಸ್ಕೃತಿ ಚಿಂತಕರು, ಪ್ರಗತಿಪರ ಮಾನವ ಹಕ್ಕುಗಳ ಹೋರಾಟಗಾರರು ಗಾಝಾದಲ್ಲಿ ಕದನ ವಿರಾಮ ಘೋಷಣೆಯಾಗಲೇ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಪದೇ ಪದೇ ಈ ಕುರಿತು ಮಾತನಾಡುತ್ತಿದ್ದು, ನಿನ್ನೆಯೂ ಸಹ ಇದನ್ನು ಪುರುಚ್ಛರಿಸಿದ್ದಾರೆ.
ಇತ್ತೀಚೆಗೆ ಪೋಪ್ ಫ್ರಾನ್ಸಿಸ್ ಅವರ ಮಾತುಗಳು:
ಪೋಪ್ ಫ್ರಾನ್ಸಿಸ್ ಅವರು ಸ್ವರ್ಗಸ್ವೀಕೃತ ಮಾತೆಯ ಹಬ್ಬದಂದು ಇಂದು ವ್ಯಾಟಿಕನ್ ನಗರದಲ್ಲಿ ವ್ಯಾಟಿಕನ್ ನಗರದಲ್ಲಿ ದೇವದೂತನ ಸಂದೇಶ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ, ತಮ್ಮ ಪ್ರಭೋದನೆಯಲ್ಲಿ ಮಾತನಾಡುತ್ತಾ, ಪ್ಯಾಲೆಸ್ತೇನಿನ ಗಾಝಾದಲ್ಲಿ ಆಗುತ್ತಿರುವ ಮಾನವ ಸಂಘರ್ಷದ ಕುರಿತು ತಮ್ಮ ಕಳವಳವನ್ನು ವ್ಯಕ್ತಡಿಸಿದ್ದಾರೆ.
ಯುದ್ಧದ ಪರಿಣಾಮವಾಗಿ ತಮ್ಮದಲ್ಲದ ತಪ್ಪಿಗೆ ಮಕ್ಕಳೂ ಸೇರಿದಂತೆ ಸಾವಿರಾರು ಜನರು ನರಳುತ್ತಿದ್ದಾರೆ. ಯುದ್ಧ ಎಂದಿಗೂ ಒಳಿತನ್ನು ಮಾಡುವುದಿಲ್ಲ ಬದಲಿಗೆ ಇದು ವಿನಾಶವನ್ನು ತರುತ್ತದೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು ಈ ಕೂಡಲೇ ಗಾಝಾದಲ್ಲಿ ಕದನ ವಿರಾಮ ಘೋಷಣೆಯಾಗಬೇಕು ಎಂದು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧ, ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಆರಂಭವಾದಾಗಿನಿಂದಲೂ ಸಹ ಪೋಪ್ ಫ್ರಾನ್ಸಿಸ್ ಅವರು ಕದನ ವಿರಾಮಕ್ಕಾಗಿ ಹಾಗೂ ಶಾಂತಿ ಸ್ಥಾಪನೆಗಾಗಿ ವಿನಂತಿಗಳನ್ನು ಮಾಡುತ್ತಲೇ ಇದ್ದಾರೆ. ಈ ಕುರಿತು ವಿವಿಧ ದೇಶಗಳ ಮುಖಂಡರೊಂದಿಗೆ ಸಹ ಮಾತುಕತೆಯನ್ನು ನಡೆಸಿದ್ದು, ವಿಶ್ವಶಾಂತಿಗಾಗಿ ನಿರಂತರ ಪ್ರಯತ್ನವನ್ನು ಮುಂದುವರೆಸಿದ್ದಾರೆ.