ಭಾರತದಲ್ಲಿ ಜ್ಯೂಬಿಲಿ 2025 ಆಚರಣೆಗೆ ತರಭೇತಿ ಕಾರ್ಯಕ್ರಮಗಳ ಆರಂಭ

ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿ (ಸಿಸಿಬಿಐ) ಪಂಜಾಬ್ ರಾಜ್ಯದ ಜಲಂಧರ್ ನಗರದಲ್ಲಿ ನೂತನ ಕಚೇರಿ "ಗ್ಯಾನೋದಯ್" ಅನ್ನು ಸ್ಥಾಪಿಸಿದೆ. ಈ ಕಚೇರಿಯಲ್ಲಿ ಧರ್ಮಕ್ಷೇತ್ರದಗಳ ಸಂಪರ್ಕ ವ್ಯಕ್ತಿಗಳ ತರಭೇತಿ ಕಾರ್ಯಕ್ರಮವನ್ನು ಜ್ಯೂಬಿಲಿ 2025 ರ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ವರದಿ: ಲಿಕಾಸ್ ನ್ಯೂಸ್

ಈ ಕಾರ್ಯಕ್ರಮವನ್ನು ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿ (ಸಿಸಿಬಿಐ), ಪೊಂಟಿಫಿಕಲ್ ಮಿಷನ್ ಆರ್ಗನೈಸೇಷನ್ಸ್ ಇನ್ ಇಂಡಿಯಾ ಹಾಗೂ ಕಮ್ಯೂನಿಯೋ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದವು.

ಈ ಕಾರ್ಯಕ್ರಮವನ್ನು ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿ (ಸಿಸಿಬಿಐ) ಯ ಉಪ ಪ್ರಧಾನ ಕಾರ್ಯದರ್ಶಿಯಾಗಿರುವ ವಂ. ಡಾ. ಸ್ಟೀಫನ್ ಅಲಥಾರ ಅವರು ಹಾಗೂ ಅವರ ತಂಡವು ಅಭಿವೃದ್ಧಿ ಪಡಿಸಿದ್ದು, ಇದರ ಉದ್ದೇಶ ಜ್ಯೂಬಿಲಿ ಆಚರಣೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಪ್ರತಿ ಧರ್ಮಕ್ಷೇತ್ರದಲ್ಲೂ ಧರ್ಮಕ್ಷೇತ್ರದ ಸಂಪರ್ಕ ವ್ಯಕ್ತಿಯೊಬ್ಬರನ್ನು ತರಭೇತಿಗೊಳಿಸುವುದಾಗಿತ್ತು.

ಈ ತರಭೇತಿಯು ಜ್ಯೂಬಿಲಿಯ ಆಧ್ಯಾತ್ಮಿಕ ಪ್ರಾಮುಖ್ಯತೆಯ ಕುರಿತು ಒತ್ತಿ ಹೇಳುವುದು ಮಾತ್ರವಲ್ಲದೆ, ಗುರುಗಳನ್ನು, ಧಾರ್ಮಿಕ ಸಹೋದರ ಸಹೋದರಿಯರನ್ನು ಹಾಗೂ ಶ್ರೀಸಾಮಾನ್ಯರನ್ನು ಈ ಕುರಿತು ಸನ್ನದ್ಧ ಪಡಿಸುವುದಾಗಿತ್ತು ಎಂದು ಕ್ಯಾಥೋಲಿಕ ಕನೆಕ್ಟ್ ವರದಿ ಮಾಡಿದೆ.  

22 August 2024, 16:39