ಗಾಝಾ-ಈಜಿಪ್ಟ್ ಗಡಿಯಲ್ಲಿ ಸೇನೆಯನ್ನು ಇರಿಸಲಿರುವ ಇಸ್ರೇಲ್
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಹು ಅವರು ಗಾಝಾ-ಈಜಿಪ್ಟ್ ಗಡಿಯಲ್ಲಿ ಸೇನೆಯನ್ನು ಇರಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮತ್ತೊಂದು ಮಗ್ಗುಲಿಗೆ ಹೊರಳಿದಂತಾಗಿದೆ.
ವರದಿ: ನೇಥನ್ ಮೋರ್ಲೆ, ಅಜಯ್ ಕುಮಾರ್
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಹು ಅವರು ಗಾಝಾ-ಈಜಿಪ್ಟ್ ಗಡಿಯಲ್ಲಿ ಸೇನೆಯನ್ನು ಇರಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮತ್ತೊಂದು ಮಗ್ಗುಲಿಗೆ ಹೊರಳಿದಂತಾಗಿದೆ.
ಹಮಾಸ್ ನಡುವೆ ಕದನ ವಿರಾಮದ ಹಿನ್ನೆಲೆಯಲ್ಲಿ ಈ ಗಡಿ ಪ್ರದೇಶದಿಂದ ಸೇನೆಯನ್ನು ವಾಪಾಸ್ ಕರೆಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದೇನೆ ಎಂಬ ಕುರಿತು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಹು ಅವರು ನಿರಾಕರಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿರುವ ಅವರು ಇಸ್ರೇಲ್ ಈ ಪ್ರದೇಶದ ಮೇಲೆ ನಿಯಂತ್ರಣವನ್ನು ಬಿಟ್ಟುಕೊಡಲು ನಿರ್ಧರಿಸಿಲ್ಲ ಎಂದು ಹೇಳಿದೆ.
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಹು ಅವರು ಕದನ ವಿರಾಮದ ಕುರಿತು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಜೊತೆ ಚರ್ಚಿಸಿದ್ದು, ಈ ಚರ್ಚೆಯ ಫಲಿತಾಂಶವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
22 August 2024, 16:53