ಗಾಝಾ ಶಾಂತಿ ಒಪ್ಪಂದ "ತುರ್ತು": ಜೋ ಬೈಡೆನ್

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಗಾಝಾ ಪ್ರದೇಶದಲ್ಲಿ ಕದನವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಇಮದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಗಾಝಾ ಪ್ರದೇಶದಲ್ಲಿ ಕದನವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಇಮದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದ್ದಾರೆ. 

ಪದೇ ಪದೇ ಇಸ್ರೇಲ್ ಗಾಜಪ್ರದೇಶದ ಮೇಲೆ ನಡೆಸುತ್ತಿರುವ ಕ್ಷಿಪಟಿ ದಾಳಿಗಳ ಹಿನ್ನೆಲೆಯಲ್ಲಿ, ಆ ಕುರಿತು ಮಾತನಾಡಿರುವ ಅಮೆರಿಕಾ ದೇಶವು ಗಾಜದಲ್ಲಿ ಶಾಂತಿ ಮಾತುಕತೆಗಳು ಮುಂದುವರೆಯಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.

ಆದರೆ ಹಮಾಸ್ ಈ ಮಾತುಕತೆಗಳ ಕುರಿತು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದು, ಇವು ಮುಂದುವರೆಯುತ್ತವೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಈ ವಿಷಯದಲ್ಲಿ ಅಮೇರಿಕಾವು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದು, ಇಸ್ರೇಲ್ ಹಾಗೂ ಹಮಾಸ್ ನಡುವಿನ ಶಾಂತಿ ಮಾತುಕತೆಗಳಿಗೆ ಉತ್ತೇಜನವನ್ನು ನೀಡುವುದಾಗಿ ಹೇಳಿದೆ.

24 August 2024, 17:32