ಕೆನ್ಯಾ: ದೇವರ ಪ್ರೀತಿಗೆ ಸಾಕ್ಷಿಯಾಗಿರುವ ಅಂಧ ಧಾರ್ಮಿಕ ಭಗಿನಿಯರು

"ದಿ ಸಾಕ್ರಮೆಂಟೇನ್ ಸಿಸ್ಟರ್ಸ್" ಎಂಬುದು ಕಿನ್ಯಾ ದೇಶದಲ್ಲಿರುವ ದೃಷ್ಟಿ ದೋಷವುಳ್ಳ ಕನ್ಯಾಸ್ತ್ರಿಯರ ಧಾರ್ಮಿಕ ಸಮುದಾಯವಾಗಿದ್ದು, ಇವರು ದೃಷ್ಟಿಯನ್ನು ಹೊಂದಿಲ್ಲದಿದ್ದರೂ ಸಹ ಇವರ ಇನ್ನಿತರ ಅಂಗಾಂಗಗಳು ದೇವರ ಮಹಿಮೆಗಾಗಿ ಕಾರ್ಯನಿರ್ವಹಿಸುತ್ತಿವೆ. ಇವರಿಗೆ ಕಣ್ಣು ಕಾಣಿಸದೆ ಇದ್ದರೂ ಸಹ ಅವರು ತೋಟಗಾರಿಕೆ, ಮಕ್ಕಳಿಗೆ ಧರ್ಮೋಪದೇಶ ತರಗತಿಗಳನ್ನು ನಡೆಸುವುದು ಸೇರಿದಂತೆ ಇನ್ನಿತರ ಪಾಲನಾ ಕಾರ್ಯಗಳನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ತಮ್ಮ ದೈನಂದಿನ ಕಾರ್ಯಗಳಿಗೆ ಈ ಭಗಿನಿಯರು ಯಾರ ಮೇಲೆಯೂ ಅವಲಂಭಿತರಾಗಿರುವುದಿಲ್ಲ. ತೋಟದಲ್ಲಿ ಕೆಲಸ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಾರೆ.

"ನಮಗೆ ಯಾರ ಕರುಣೆಯೂ ಬೇಡ. ದೇವರ ಪಾಲನಾ ಸೇವೆಯನ್ನು ಮಾಡಲು ಅವಕಾಶಗಳು ಸಿಕ್ಕಿದರೆ ಸಾಕು" ಎನ್ನುತ್ತಾರೆ ಸಿಸ್ಟರ್ ಮೇರಿ ಕಾರ್ಮಿನ್ ಅವರು. ಸಾಕ್ರಮೆಂಟೈನ್ ಸಭೆಗೆ ಸೇರಿರುವ ಈ ಭಗಿನಿಯರ ಕಾನ್ವೆಂಟ್ ದೃಷ್ಟಿದೋಷವನ್ನು ಹೊಂದಿರುವ ಭಗಿನಿಯರ ಕಾನ್ವೆಂಟ್ ಆಗಿದ್ದು, ಇದು ಕೆನ್ಯಾ ದೇಶದಲ್ಲೇ ವಿಶೇಷ ತಾಣ ಎನಿಸಿದೆ. 

05 August 2024, 18:44