ಮೆಡಿಟರೇನಿಯನ್'ನಲ್ಲಿ 182 ವಲಸಿಗರನ್ನು ರಕ್ಷಿಸಿದ ಮಾರಿ ಜೊನಿಯೋ ಹಡಗು
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ಇಟಲಿ ಸರ್ಕಾರದೊಂದಿಗೆ ಇಟಲಿಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಜಂಟಿಯಾಗಿ ಸ್ಥಾಪಿಸಿರುವ ಮಾರಿ ಜೋನಿಯೋ ಎಂಬ ರಕ್ಷಣಾ ಕಾರ್ಯಪಡೆಯು ಮೆಡಿಟರೇನಿಯನ್ ಸಾಗರದಲ್ಲಿ ಮುಳುಗುತ್ತಿದ್ದ 182 ವಲಸಿಗರನ್ನು ರಕ್ಷಿಸಿದೆ ಎಂದು ವರದಿಯಾಗಿದೆ.
ಶನಿವಾರ ಸಂಜೆ ಆರು ಘಂಟೆಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಚಿಕ್ಕ ದೋಣಿಯೊಂದು ದಿಕ್ಕಾಪಾಲಾಗಿ ತೇಲುತ್ತಿರುವುದನ್ನು ಕಂಡ ಮಾರಿ ಜೋನೊಯೋ ಎಂಬ ಮಾನವೀಯ ನೆರವಿನ ಹಡಗು, ಕೂಡಲೇ ಅದರ ಹತ್ತಿರಕ್ಕೆ ಧಾವಿಸಿತು. ಇದರ ಪರಿಣಾಮ ಇನ್ನೇನು ನೂರಾರು ಜನರು ಸಮುದ್ರದಲ್ಲಿ ಮುಳುಗಿ, ಸಾಯಲಿದ್ದಾರೆ ಎನ್ನುವ ಸಂದರ್ಭದಲ್ಲಿ ಅವರೆಲ್ಲರನ್ನು ರಕ್ಷಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದೆ.
ಈ ಹಡಗನ್ನು ಜನರನ್ನು ವಿಶೇಷವಾಗಿ ವಲಸಿಗರನ್ನು ರಕ್ಷಿಸುವ ಉದ್ದೇಶದಿಂದ ಇಟಲಿಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಜಂಟಿಯಾಗಿ ಇಟಲಿ ಸರ್ಕಾರದೊಂದಿಗೆ ಸ್ಥಾಪಿಸಿದೆ. ರಕ್ಷಿಸಲ್ಪಟ್ಟ ಎಲ್ಲರೂ ಸಹ ಉತ್ತರ ಆಫ್ರಿಕಾ ಮೂಲದವರಾಗಿದ್ದು, ಸದ್ಯಕ್ಕೆ ಎಲ್ಲರನ್ನು ಲಾಂಪೆಡೂಸಾ ಎಂಬಲ್ಲಿ ಆಶ್ರಯ ನೀಡಲಾಗಿದೆ.