ಮಠಗಲ್ಪ ಧರ್ಮಕ್ಷೇತ್ರದ ಕಾರಿತಾಸ್ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಿದ ನಿಕರಾಗುವ ಸರ್ಕಾರ

ನಿಖರಾಗುವ ಸರ್ಕಾರವು ಮಠಗಲ್ಪ ಧರ್ಮಕ್ಷೇತ್ರದ ಕಾರಿತಾಸ್ ಸಂಸ್ಥೆಯ ನೋಂದಣಿಯನ್ನು ಸೇರಿದಂತೆ ಇನ್ನಿತರ ದತ್ತಿ ಸಂಸ್ಥೆಗಳನ್ನು ರದ್ದು ಮಾಡಿದೆ. ಹಲವು ತಿಂಗಳುಗಳಿಂದ ಇಲ್ಲಿ ಕಥೋಲಿಕ ಗುರುಗಳನ್ನು ಬಂಧಿಸಿದ ಪ್ರಕರಣಗಳು ವರದಿಯಾಗಿದೆ.

ವ್ಯಾಟಿಕನ್ ನ್ಯೂಸ್

ನಿಖರಾಗುವ ಸರ್ಕಾರವು ಮಠಗಲ್ಪಧರ್ಮ ಕ್ಷೇತ್ರದ ಕಾರಿತಾ ಸಂಸ್ಥೆ ಸೇರಿದಂತೆ ಇನ್ನಿತರ ಕಥೋಲಿಕ ದತ್ತಿ ಸಂಸ್ಥೆಗಳನ್ನು ರದ್ದು ಮಾಡಿದೆ. ಈ ಸಂಸ್ಥೆಗಳನ್ನು ರದ್ದು ಮಾಡಿದ ಪರಿಣಾಮ ಅವುಗಳಿಗೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಹಾಗೂ ಅಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಕಳೆದ ಹಲವು ತಿಂಗಳುಗಳಿಂದ ಅಲ್ಲಿನ ಸರ್ಕಾರವು ಕಥೋಲಿಕ ಧರ್ಮಸಭೆಯನ್ನು ಗುರಿಪಡಿಸಿದ್ದು, ಅನೇಕ ಗುರುಗಳನ್ನು ಬಂಧಿಸಿದೆ ಮಾತ್ರವಲ್ಲದೆ ಹಲವರನ್ನು ಗಡಿಪಾರು ಮಾಡಿದೆ. ಕಥೋಲಿಕ ದತ್ತಿ ಸಂಸ್ಥೆಗಳನ್ನು ರದ್ದುಪಡಿಸಿರುವದಕ್ಕೆ ಈ ಸಂಸ್ಥೆಗಳು ಕಳೆದ ಎರಡು ವರ್ಷಗಳಿಂದ ತಮ್ಮ ಹಣಕಾಸು ದಾಖಲೆಗಳನ್ನು ಹಾಗೂ ಹೇಳಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಿರುವುದಿಲ್ಲ ಎಂಬುದಾಗಿದೆ.

ಮುಂದುವರೆದು ತನ್ನ ಆದೇಶದಲ್ಲಿ ಹೇಳಿರುವ ಸರ್ಕಾರವು ಈ ದತ್ತಿ ಸಂಸ್ಥೆಗಳ ಆಸ್ತಿಪಾಸ್ತಿಗಳನ್ನು ಸರ್ಕಾರಕ್ಕೆ ವರ್ಗಾಯಿಸುವುದು ಸರ್ಕಾರದ ಅಟಾರ್ನಿ ಜನರಲ್ ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ. ಈ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವಾಲಯವು ಈ ದತ್ತು ಸಂಸ್ಥೆಗಳನ್ನು ರದ್ದುಪಡಿಸಿ ಆದೇಶ ನೀಡಿದೆ.

13 August 2024, 18:21