ಹುಡುಕಿ

ಭಾರತದ ಮೌಂಟ್ ಕಾರ್ಮೆಲ್ ಕಾಲೇಜ್ ವಿದ್ಯಾರ್ಥಿಗಳಿಗೆ ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ

ಕ್ರೈಸ್ತ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಭಾರತದ ಮೌಂಟ್ ಕಾರ್ಮೆಲ್ ಕಾಲೇಜ್ ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ವರದಿ: ಲಿಕಾಸ್ ನ್ಯೂಸ್

ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನ ಕ್ರೈಸ್ತ ವಿದ್ಯಾರ್ಥಿಗಳ ಒಕ್ಕೂಟವು ಆಗಸ್ಟ್ ಎರಡರಂದು "ಸ್ತಾರೋಸ್" ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದರಲ್ಲಿ ಭಾಗವಹಿಸಲು ಬೆಂಗಳೂರಿನ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸುಮಾರು ನಾಲ್ಕು ಸಾವಿರ ಜನ ಯುವ ಕ್ರೈಸ್ತ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ಮಾಹಿತಿಯನ್ನು ಕ್ಯಾಥೋಲಿಕ್ ಕನೆಕ್ಟ್ ವರದಿ ಮಾಡಿದೆ.

ಯುವಜನರ ಸರ್ವತೋಮುಖ ಬೆಳವಣಿಗೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮೌಂಟ್ ಕಾರ್ಮೆಲ್ ಕಾಲೇಜಿನ ಉಪಕ್ರಮಗಳನ್ನು ಭಾರತದ ಕಥೋಲಿಕ ಧರ್ಮಧ್ಯಕ್ಷರ ಮಂಡಳಿಯ (ಸಿ ಸಿ ಬಿ ಐ) ಪ್ರಧಾನ ಕಾರ್ಯದರ್ಶಿ ವಂ. ಡಾ. ಸ್ಟೀಫನ್ ಅಲತಾರ ಅವರು ಶ್ಲಾಘಿಸಿದರು.

"ತಮ್ಮ ಪ್ರತಿಭೆಗಳ ಮೂಲಕ ಶುಭ ಸಂದೇಶವನ್ನು ಸಾರಲು ವಿದ್ಯಾರ್ಥಿಗಳಿಗೆ ನಾವು ವೇದಿಕೆಯನ್ನು ಕಲ್ಪಿಸುತ್ತೇವೆ. ಇದು ಅವರ ವಿಶ್ವಾಸವನ್ನು ವೃದ್ಧಿಸುತ್ತದೆ ಮಾತ್ರವಲ್ಲದೆ ಅದನ್ನು ದೃಢೀಕರಿಸುತ್ತದೆ" ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ನಿರ್ದೇಶಕರಾದ ಸಿಸ್ಟರ್ ಅಲ್ಬೀನಾ, ಸಿ ಎಸ್ ಎಸ್ ಟಿ ಅವರು ಹೇಳಿದ್ದಾರೆ.

"ಸರ್ವತೋಮುಖ ಶಿಕ್ಷಣವನ್ನು ಉತ್ತೇಜಿಸಲು ನಾವು ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಸಂಗೀತ ಹಾಗೂ ವಿವಿಧ ಪ್ರತಿಗಳ ಪ್ರತಿಭೆಗಳ ಸಂಗೀತ ಹಾಗೂ ವಿವಿಧ ಪ್ರತಿಭೆಗಳ ಮೂಲಕ ಯುವ ಜನರು ವಿಶ್ವಾಸ ಹಾಗೂ ನಂಬಿಕೆಯನ್ನು ಸಾರುತ್ತಾರೆ." ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಿನ್ಸಿಪಲ್ ಡಾ. ಲೇಖ ಜಾರ್ಜ್ ಅವರು ಹೇಳಿದ್ದಾರೆ.

05 August 2024, 18:27