ನೆರವನ್ನು ಪಡೆಯುವ ಮೂಲಕ ಸಾವನ್ನು ಅಪ್ಪಿಕೊಳ್ಳುವ ಕಾನೂನನ್ನು ಜಾರಿಗೊಳಿಸಲಿರುವ ಸ್ಕಾಟ್ಲೆಂಡ್ ಸಂಸತ್ತು
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಸ್ಕಾಟ್ಲೆಂಡ್ ಸಂಸತ್ತು ನೆರವನ್ನು ಪಡೆಯುವ ಮೂಲಕ ಸಾವನ್ನು ಒಪ್ಪಿಕೊಳ್ಳುವ ಕಾನೂನನ್ನು ಜಾರಿಗೊಳಿಸಲು ಚಿಂತನೆಯನ್ನು ನಡೆಸಿದ ಎಂದು ವರದಿಯಾಗಿದೆ. ಇದನ್ನು ಪ್ರಬಲವಾಗಿ ವಿರೋಧಿಸಿರುವ ಸ್ಕಾಟ್ಲಂಡ್ ದೇಶದ ಕಥೋಲಿಕ ಧರ್ಮಸಭೆಯು ಇದು ಜೀವದ ಹಕ್ಕಿನ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದೆ.
ಸ್ಕಾಟ್ಲೆಂಡ್ ದೇಶದ ಕಥೋಲಿಕ ಧರ್ಮಧ್ಯಕ್ಷರು ಸ್ಕಾಟ್ಲಂಡ್ ಸರ್ಕಾರವು ಈ ರೀತಿಯ ಕಾನೂನನ್ನು ಜಾರಿಗೊಳಿಸಿದ್ದಾರೆ ಅದು ಈ ದೇಶದ ಮೌಲ್ಯಗಳ ವಿರುದ್ಧ ಹೋಗಲಿದೆ ಮಾತ್ರವಲ್ಲದೇ ಜೀವದ ಹಕ್ಕನ್ನು ಪ್ರತಿಪಾದಿಸುವ ಎಲ್ಲರ ವಿರುದ್ಧವು ಇದು ಹೋಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಜೀವನ ಎಂಬುದು ನಮಗೆ ದೇವರು ನೀಡುವ ಉಡುಗೊರೆಯಾಗಿದ್ದು ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಮಾತ್ರ ಅವರೇ ನೀಡಿದ ಜೀವವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.
ಡೆಮಾಕ್ರೆಟಿಕ್ ಪಕ್ಷದ ಸಂಸದರೊಬ್ಬರು ಇದನ್ನು ರಚಿಸಿದ್ದು ಕಳೆದ ವರ್ಷ ಇದನ್ನು ಪ್ರಕಟಿಸಲಾಗಿತ್ತು. ಇದೀಗ ಸಂಸತ್ತಿನಲ್ಲಿ ಈ ಕುರಿತ ಚರ್ಚೆಗೆ ಅವಕಾಶವನ್ನು ನೀಡಲಾಗಿದ್ದು, ಸಂಸದರುಗಳು ಇದನ್ನು ಪರಿಶೀಲಿಸಿ, ಅದರ ಕುರಿತು ವ್ಯಾಪಕ ಚರ್ಚೆಯನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ.