ಗಾಝಾ ಕದನ ವಿರಾಮಕ್ಕಾಗಿ ಸಮಯ ವ್ಯರ್ಥ ಮಾಡುವಂತಿಲ್ಲ: ಅಮೇರಿಕಾ ರಾಜ್ಯ ಕಾರ್ಯದರ್ಶಿ
ಅಮೇರಿಕಾದ ರಾಜ್ಯ ಕಾರ್ಯದರ್ಶಿಯಾಗಿರುವ ಆ್ಯಂಟನಿ ಬ್ಲಿಂಕೆನ್ ಅವರು ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಕುರಿತಂತೆ ಮಾತನಾಡಿದ್ದು, ಗಾಝಾ ಕದನವಿರಾಮ ಎಂಬುದು ಅತ್ಯಂತ ತುರ್ತಾಗಿದ್ದು, ಅದನ್ನು ಸಾಧಿಸಲೇ ಬೇಕಿದೆ. ಅದು ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಹೇಳಿದ್ದಾರೆ.
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಅಮೇರಿಕಾದ ರಾಜ್ಯ ಕಾರ್ಯದರ್ಶಿಯಾಗಿರುವ ಆ್ಯಂಟನಿ ಬ್ಲಿಂಕೆನ್ ಅವರು ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಕುರಿತಂತೆ ಮಾತನಾಡಿದ್ದು, ಗಾಝಾ ಕದನವಿರಾಮ ಎಂಬುದು ಅತ್ಯಂತ ತುರ್ತಾಗಿದ್ದು, ಅದನ್ನು ಸಾಧಿಸಲೇ ಬೇಕಿದೆ. ಅದು ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು "ಹಮಾಸ್ ಈ ಕುರಿತು ಗಂಭೀರವಾಗಿ ಯೋಚಿಸಿ, ಭವಿಷ್ಯದ ನಿಟ್ಟಿನಲ್ಲಿ ಈ ಕೂಡಲೇ ಶಾಂತಿ ಮಾತುಕತೆಗಳಿಗೆ ಸನ್ನದ್ಧವಾಗಬೇಕಿದೆ" ಎಂದು ಅವರು ಹೇಳಿದ್ದಾರೆ. ಮೊನ್ನೆಯಷ್ಟೇ ಅಮೇರಿಕಾವು ಹಮಾಸ್ ಹಾಗೂ ಇಸ್ರೇಲ್ ನಡುವಿನ ಶಾಂತಿ ಮಾತುಕತೆಗಳ ಕುರಿತು ಮಾತನಾಡಿತ್ತು.
ಈ ಹಿಂದೆ ಈಜಿಪ್ಟ್ ಸೇರಿದಂತೆ, ಕತಾರ್ ಹಾಗೂ ಹಲವು ದೇಶಗಳು ಶಾಂತಿ ಮಾತುಕತೆಗಳಿಗೆ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬೇಕಿದೆ.
21 August 2024, 18:46