ಹುಡುಕಿ

ಸಭೆಯಲ್ಲಿ ಉಕ್ರೇನ್ ಯುದ್ಧದ ಕುರಿತು ಚರ್ಚಿಸಿದ ಸ್ಟ್ರಾಮರ್ ಮತ್ತು ಬೈಡೆನ್

ಬ್ರಿಟನ್ ಪ್ರಧಾನ ಮಂತ್ರಿ ಕೀರ್ ಸ್ಟ್ರಾಮರ್ ಅವರು ಅಮೇರಿಕಾದ ವಾಷಿಂಗ್ಟನ್ ಡಿ ಸಿ ನಗರದಲ್ಲಿರುವ ಶ್ವೇತ ಭವನದಲ್ಲಿ ಅಮೇರಿಕಾ ಅಧ್ಯಕ್ಷ ಜೋಬೈಡೆನ್ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧದ ಕುರಿತು ಚರ್ಚಿಸಿದ್ದಾರೆ.

ವರದಿ: ಸೂಸಿ ಹಾಡ್ಜಸ್, ಅಜಯ್ ಕುಮಾರ್

ಬ್ರಿಟನ್ ಪ್ರಧಾನ ಮಂತ್ರಿ ಕೀರ್ ಸ್ಟ್ರಾಮರ್ ಅವರು ಅಮೇರಿಕಾದ ವಾಷಿಂಗ್ಟನ್ ಡಿ ಸಿ ನಗರದಲ್ಲಿರುವ ಶ್ವೇತ ಭವನದಲ್ಲಿ ಅಮೇರಿಕಾ ಅಧ್ಯಕ್ಷ ಜೋಬೈಡೆನ್ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧದ ಕುರಿತು ಚರ್ಚಿಸಿದ್ದಾರೆ. 

ಒಂದು ವೇಳೆ ಉಕ್ರೇನ್ ದೇಶವು ಬಹುದೂರ ಕ್ರಮಿಸುವ ಕ್ಷಿಪಣಿಗಳನ್ನು ರಷ್ಯಾದ ದೇಶದ ಮೇಲೆ ದಾಳಿ ಮಾಡಲು ಬಳಸಿದರೆ, ಉಕ್ರೇನ್ ದೇಶಕ್ಕೆ ಈ ಕ್ಷಿಪಣಿಗಳನ್ನು ನೀಡಲು ನೆರವಾದ ಪಾಶ್ಚಾತ್ಯ ದೇಶಗಳು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಎಚ್ಚರಿಕೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ರಿಟನ್ ಪ್ರಧಾನಮಂತ್ರಿ ಸ್ಟ್ರಾಮರ್ ಅವರು "ಚರ್ಚೆ ಬಹಳಷ್ಟು ಫಲಪ್ರದಾಯಕವಾಗಿದೆ. ನಮ್ಮ ಚರ್ಚೆಯಲ್ಲಿ ಉಕ್ರೇನ್ ಕುರಿತು ಮಾತ್ರವಲ್ಲ ಮಧ್ಯಪ್ರಾಚ್ಯ ಹಾಗೂ ಇಂಡೋ-ಫೆಸಿಫಿಕ್ ಕುರಿತು ಸಹ ಚರ್ಚಿಸಲಾಗಿದೆ." ಎಂದು ಹೇಳಿದರು.

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸುವ ದಾಳಿಯನ್ನು ಕೊಂಚಮಟ್ಟಿಗೆ ನಿಲ್ಲಿಸಬೇಕೆಂದರೆ ಅಮೇರಿಕಾವು ರಷ್ಯಾ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಲು ಅನುಮತಿ ನೀಡಬೇಕು ಎಂದು ಅಂಗಲಾಚುತ್ತಿದ್ದಾರೆ.      

14 September 2024, 17:14