ಹೈಟಿ: ಶಾಂತಿಪಾಲಕ ಪಡೆಗಳ ಬಲ ಸಂವರ್ಧನೆಗೆ ಹೆಚ್ಚಿನ ನೆರವು ನೀಡಿದ ಕೆನ್ಯಾ
2023ರಲ್ಲಿ ಹೈಟಿಯ ರಾಜಧಾನಿ ಪೋರ್ಟ್-ಆ-ಪ್ರಿನ್ಸ್ನಲ್ಲಿ ಗ್ಯಾಂಗ್ ಹಿಂಸೆಯಿಂದ 5,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೈಟಿಯ ದುಸ್ಥಿತಿಯನ್ನು ಪೋಪ್ ಫ್ರಾನ್ಸಿಸ್ ಕೂಡ ವ್ಯಾಪಕವಾಗಿ ಅರಿತಿದ್ದಾರೆ ಮತ್ತು ಅಲ್ಲಿನ ಧಾರ್ಮಿಕ ವ್ಯಕ್ತಿಗಳಿಗೆ ಹಾಗೂ ಮಕ್ಕಳಿಗೆ ಸಹಾಯ ಮಾಡುವಂತೆ ಕೋರಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಹೈಟಿ ದೇಶದ ಗುಂಪು ಹಿಂಸೆಯನ್ನು ಕಡಿಮೆ ಮಾಡಲು, ವಿಶ್ವದ ಪ್ರಮುಖ ರಾಷ್ಟ್ರಗಳು ಸೇರಿ ಒಂದು ಅಂತಾರಾಷ್ಟ್ರೀಯ ಭದ್ರತಾ ಪಡೆ ರಚನೆ ಮಾಡಲಾಗಿದೆ. ಈ ಯೋಜನೆಯನ್ನು ಕೀನ್ಯಾದ ನೇತೃತ್ವದಲ್ಲಿ ನಡೆಸಲಾಗುತ್ತಿದೆ, ಮತ್ತು ಅಮೆರಿಕವು ಸುಮಾರು 200 ಮಿಲಿಯನ್ ಡಾಲರ್ ಆರ್ಥಿಕ ಸಹಾಯವನ್ನು ಒದಗಿಸಿದೆ.
ಕೆನ್ಯಾ, ಫ್ರಾನ್ಸ್, ಜಮೈಕಾ, ಬೆನಿನ್ ದೇಶಗಳು ಕೂಡ ತಮ್ಮ ಸಹಾಯವನ್ನು ಘೋಷಿಸಿವೆ. ಗುಂಪು ಹಿಂಸೆಯಿಂದ ಜನರು ಭೀತಿಯಿಂದ ಬದುಕಬೇಕಾದ ಪರಿಸ್ಥಿತಿಯನ್ನು ಸರಿಪಡಿಸಲು, ಹೈಟಿಯ ರಾಷ್ಟ್ರೀಯ ಪೊಲೀಸರಿಗೆ ನೆರವು ನೀಡುವುದು ಈ ಸೈನಿಕ ಪಡೆಗಳ ಮುಖ್ಯ ಉದ್ದೇಶವಾಗಿದೆ.
2023ರಲ್ಲಿ ಹೈಟಿಯ ರಾಜಧಾನಿ ಪೋರ್ಟ್-ಆ-ಪ್ರಿನ್ಸ್ನಲ್ಲಿ ಗುಂಪು ಹಿಂಸೆಯಿಂದ 5,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೈಟಿಯ ದುಸ್ಥಿತಿಯನ್ನು ಪೋಪ್ ಫ್ರಾನ್ಸಿಸ್ ಕೂಡ ವ್ಯಾಪಕವಾಗಿ ಚಿಂತಿಸಿದ್ದಾರೆ ಮತ್ತು ಅಲ್ಲಿನ ಧಾರ್ಮಿಕ ವ್ಯಕ್ತಿಗಳಿಗೆ ಹಾಗೂ ಮಕ್ಕಳಿಗೆ ಸಹಾಯ ಮಾಡುವಂತೆ ಕೋರಿದ್ದಾರೆ.
23 September 2024, 17:02