2024.08.20 Nicaragua, chiuse 1500 ong

ನಿಕರಾಗುವಾದಲ್ಲಿನ ನೂತನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ ವಿಶ್ವಸಂಸ್ಥೆ

ನಿಕಾರುಗುವಾದಲ್ಲಿ ಓರ್ತೇಗಾ ಸರ್ಕಾರವು ಧಾರ್ಮಿಕ ಸಮುದಾಯಗಳನ್ನು ಗುರಿ ಪಡಿಸಿದ್ದು, ಅವರ ಮೇಲೆ ಅನಾವಶ್ಯಕ ಮಿತಿಗಳನ್ನು ಹೇರುತ್ತಿದೆ. ಈ ಕುರಿತು ಹೊಸ ವರದಿಯನ್ನು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯು ನಿಕರಾಗುವ ಸರ್ಕಾರದ ಮಾನವ ಹಕ್ಕುಗಳ ವಿರೋಧಿ ಕ್ರಮಗಳನ್ನು ಖಂಡಿಸಿದೆ.

ವರದಿ: ಒಸ್ಸರ್ವತೋರೆ ರೊಮಾನೋ

ನಿಕಾರುಗುವಾದಲ್ಲಿ ಓರ್ತೇಗಾ ಸರ್ಕಾರವು ಧಾರ್ಮಿಕ ಸಮುದಾಯಗಳನ್ನು ಗುರಿ ಪಡಿಸಿದ್ದು, ಅವರ ಮೇಲೆ ಅನಾವಶ್ಯಕ ಮಿತಿಗಳನ್ನು ಹೇರುತ್ತಿದೆ. ಈ ಕುರಿತು ಹೊಸ ವರದಿಯನ್ನು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯು ನಿಕರಾಗುವ ಸರ್ಕಾರದ ಮಾನವ ಹಕ್ಕುಗಳ ವಿರೋಧಿ ಕ್ರಮಗಳನ್ನು ಖಂಡಿಸಿದೆ.

ಇತ್ತೀಚೆಗಷ್ಟೇ ನಿಕರಾಗುವಾ ದೇಶದಲ್ಲಿ ಗುರುಗಳನ್ನು ಸರ್ಕಾರವು ಬಂಧಿಸಿದ ಅನೇಕ ಘಟನೆಗಳನು ನಡೆದಿದ್ದವು. ಇದು ಮಾತ್ರವಲ್ಲದೆ ಹಲವಾರು ಗುರುಗಳನ್ನು ಇಲ್ಲಿನ ಸರ್ಕಾರವು ಸರಿಯಾದ ಕಾರಣಗಳಿಲ್ಲದೆ ಗಡೀಪಾರು ಸಹ ಮಾಡಿತ್ತು.

ಮುಂದುವರೆದು ನಿಕರಾಗುವಾದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಒರ್ತೇಗಾ ಸರ್ಕಾರವು ಎಲ್ಲಾ ಚರ್ಚುಗಳ ಕಾಣಿಕೆ ಸಂಗ್ರಹದ ಮೇಲೆ ತೆರಿಗೆಯನ್ನು ವಿಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಕುರಿತು ಅ‌ಧ್ಯಯನ ನಡೆಸಿ, ವರದಿಯನ್ನು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯು ನಿಕರಾಗುವ ದೇಶದಲ್ಲಿ ಸರ್ಕಾರವು ಅನಾವಶ್ಯಕವಾಗಿ ಧಾರ್ಮಿಕ ಸಮುದಾಯಗಳ ಮೇಲೆ ದಾಳಿಯನ್ನು ಮಾಡುತ್ತಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ನೇರವಾಗಿ ಹೇಳಿದೆ.

04 September 2024, 16:11