ಬೈರೂತ್ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗುತ್ತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಿವಾಸದ ಮೇಲೆ ಹಮಾಸ್‌ ಡ್ರೋನ್‌ ದಾಳಿ ನಡೆಸಿದ ಬಳಿಕ ಇಸ್ರೇಲ್‌ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚು ಮಾಡಿದೆ. ಮಂಗಳವಾರವೂ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಬೈರೂತ್‌ನ ಬೃಹತ್‌ ಕಟ್ಟಡಗಳು ಸೆಕೆಂಡುಗಳಲ್ಲಿ ನೆಲೆ ಕಚ್ಚಿವೆ.

ವರದಿ: ವ್ಯಾಟಿಕನ್ ನ್ಯೂಸ್

ಇಸ್ರೇಲಿ ಮಿಲಿಟರಿ ವಕ್ತಾರ ಅವಿಚಾಯ್‌ ಅಡ್ರೇ ಅವರು ಎಚ್ಚರಿಕೆ ನೀಡಿದ 40 ನಿಮಿಷಗಳ ಬಳಿಕ ದಾಳಿ ಸಂಭವಿಸಿದೆ. ದಾಳಿಗೆ ಒಳಗಾದ ಎರಡು ಬೃಹತ್‌ ಕಟ್ಟಡಗಳಲ್ಲಿ ಹಿಜ್ಬುಲ್ಲಾ ಸೌಲಭ್ಯಗಳನ್ನು ಅಡಗಿಸಿಡಲಾಗಿತ್ತು. ಅಲ್ಲದೇ ಲೆಬನಾನ್‌ನಿಂದ ಸ್ಥಳಾಂತರಗೊಂಡಿದ್ದ ಕುಟುಂಬಗಳೂ ಆಶ್ರಯ ಪಡೆದಿದ್ದವು ಎಂದು ವರದಿಗಳು ತಿಳಿಸಿವೆ. 

ಇಸ್ರೇಲ್‌ ವಾಯುದಾಳಿಯ 32 ಸೆಕೆಂಡುಗಳ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉದ್ಯಾನ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ದೈತ್ಯ ಕಟ್ಟಡ ಮಿಸೈಲ್‌ ಬೀಳುತ್ತಿದ್ದಂತೆ ಕೇವಲ 3 ಸೆಕೆಂಡುಗಳಲ್ಲೇ ಧ್ವಂಸವಾಗಿದೆ. ಸಮೀಪದಲ್ಲೇ ಇದ್ದ ಸ್ಥಳೀಯರು ದಾಳಿ ಕಂಡು ಕಕ್ಕಾಬಿಕ್ಕಿಯಾಗಿರುವುದು ವೀಡಿಯೋದಲ್ಲಿ ತೋರಿಸಿದೆ. ಸದ್ಯ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

ಇನ್ನೂ ಜೆರುಸಲೆಮ್‌ನ ಮಾನವ ಹಕ್ಕುಗಳ ಗುಂಪಾದ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಅಲ್-ಕರ್ದ್ ಅಲ್-ಹಸನ್, ಇಸ್ರೇಲ್‌ ವಾಯುದಾಳಿಯನ್ನು ಖಂಡಿಸಿದೆ. ಹಿಜ್ಬುಲ್ಲಾದ ಸಂಯೋಜಿತ ಹಣಕಾಸು ಶಾಖೆಗಳನ್ನ ಇಸ್ರೇಲ್‌ ಗುರಿಯಾಗಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.

23 October 2024, 15:41