ಹುಡುಕಿ

ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್ ಹತ್ಯೆ ಮಾಡಿದ ಇಸ್ರೇಲ್ ಸೇನೆ

ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್ ಅವರು ಹತ್ಯೆಯಾಗಿರ ಬಹುದು ಎಂದು ಇಸ್ರೇಲ್ ಸೇನೆಯು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ವರದಿ: ಅಜಯ್ ಕುಮಾರ್

ದಕ್ಷಿಣ ಗಾಜಾದಲ್ಲಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕಾರ್ಯಾಚರಣೆ ವೇಳೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಮೃತಪಟ್ಟಿದ್ದಾರೆ. ಈ ಬಗ್ಗೆ ಐಡಿಎಫ್ ಖಚಿತಪಡಿಸಿದೆ. ಗಾಜಾಪಟ್ಟಿಯಲ್ಲಿ ನಡೆದ ಕಾರ್ಯಾರಣೆಯಲ್ಲಿ 3 ಉಗ್ರರು ಮೃತಪಟ್ಟಿದ್ದಾರೆ. ಇದದಲ್ಲಿ ಹಮಾಸ್‌ ಮುಖ್ಯಸ್ಥರನ್ನು ಹೋಲುವ ಶವವು ಪತ್ತೆಯಾಗಿತ್ತು. ಈ ಹಿನ್ನೆಲೆ ಆ ಶವದ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗಿದೆ. ಆರಂಭದಲ್ಲಿ ಅಲ್ಲಿನ ಸ್ಥಳೀಯ ಸುದ್ದಿವಾಹಿಗಳು ಹಮಾಸ್‌ ಮುಖ್ಯಸ್ಥನ ಹತ್ಯೆಯಾಗಿದೆ ಎಂದು ವರದಿ ಮಾಡಿದ್ದವು. ಆ ಬಳಿಕ ಐಎಡಿಎಫ್‌ ಯಾಹ್ಯಾ ಸಿನ್ವರ್‌ ಇನ್ನಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರವ ಇಸ್ರೇಲ್‌ ರಕ್ಷಣಾ ಪಡೆ, "Eliminated: Yahya Sinwar " ಎಂದು ಪೋಸ್ಟ್‌ ಹಾಕಿದೆ. ಈ ಮೂಲಕ ಕಳೆದ ವರ್ಷ ಇಸ್ರೇಲ್‌ ಮೇಲಿನ ದಾಳಿಕೆ ಕಾರಣವಾದ ಮತ್ತೊಬ್ಬ ವ್ಯಕ್ತಿಯ ಜೀವವನ್ನು ಇಸ್ರೇಲ್‌ ತೆಗೆದು ಸೇಡು ತೀರಿಸಿಕೊಂಡಿದೆ.

ಇನ್ನು ಹಮಾಸ್‌ ಪಡೆಯ ಮೇಲೆ ಇಸ್ರೇಲ್‌ ದಾಳಿಯನ್ನು ಮುಂದುವರೆಸಿದೆ. ಮೂವರು ಹಮಾಸ್‌ ಕಾರ್ಯಕರ್ತರ ಹತ್ಯೆಯಾದ ಕಟ್ಟಡದಲ್ಲಿ ಇಸ್ರೇಲಿ ಒತ್ತೆಯಾಳುಗಳು ಇರುವ ಸಾಧ್ಯತೆಗಳಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಕೆಲ ತಿಂಗಳ ಹಿಂದೆ ಲೆಬನಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿತ್ತು. ಈ ಬೆನ್ನಲ್ಲೇ ಸಿನ್ವರ್‌ನನ್ನು ಹತ್ಯೆ ಮಾಡಿಇ ಮೇಲುಗೈ ಸಾಧಿಸಿದೆ.

18 October 2024, 18:36