ತೀವ್ರವಾದ ಇಸ್ರೇಲ್ ದಾಳಿ; ವಿಶ್ವಸಂಸ್ಥೆ ಕಳವಳ
ವರದಿ: ವ್ಯಾಟಿಕನ್ ನ್ಯೂಸ್
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಉತ್ತರ ಗಾಜಾದಲ್ಲಿ ಇಸ್ರೇಲ್‌ನ 24 ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೋಮವಾರದ ವರೆಗೆ (ಅ 28)1,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಲಾಗಿದೆ.
ಲೆಬನಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲಿ ಜೆಟ್‌ಗಳು ಟೈರ್ ನಗರವ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಕನಿಷ್ಠ ಏಳು ಮಂದಿ ಸಾವನ್ನಪ್ಪಿ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಇಸ್ರೇಲಿ ಪಡೆಗಳು ಗಾಜಾದಲ್ಲಿ ಕನಿಷ್ಠ 53 ಜನರನ್ನು ಮತ್ತು ಲೆಬನಾನ್‌ನಲ್ಲಿ 21 ಜನರನ್ನು ಭಾನುವಾರ ನಡೆಸಿದ ಭಾರೀ ದಾಳಿಯಲ್ಲಿ ಹತ್ಯೆಗೈದಿವೆ ಎಂದು ವರದಿಯಾಗಿದೆ.
ಕಳೆದ ವಾರ ದಕ್ಷಿಣ ಲೆಬನಾನ್‌ನಲ್ಲಿ ಮೂವರು ಪತ್ರಕರ್ತರ ಸಾವಿಗೆ ಕಾರಣವಾದ ಇಸ್ರೇಲಿ ದಾಳಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿರುವುದಾಗಿ ಲೆಬನಾನ್ ಸೋಮವಾರ ಪ್ರಕಟಿಸಿದೆ.
ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಉತ್ತರ ಗಾಜಾದಲ್ಲಿ ಸಂಭವಿಸುತ್ತಿರುವ ಸಾವು, ಗಾಯ ಮತ್ತು ವಿನಾಶದ ಭೀಕರತೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.