ದಕ್ಷಿಣ ಲೆಬನಾನ್ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಇಸ್ರೇಲ್ ದೇಶವು ಹೆಜ್ಬೊಲ್ಲಾ ನಿರ್ನಾಮಕ್ಕಾಗಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಲೆಬನಾನ್ ದೇಶದ ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ಇದರಿಂದ 15 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿಗೆ ಲೆಬಾನನ್ ದೇಶದ ಮೇಲೆ ನಡೆಯುತ್ತಿರುವ ವೈಮಾನಿಕ ದಾಳಿಗಳು ಇಲ್ಲಿನ ಬೆಕ್ಕಿ ಕಣಿವೆಯನ್ನು ಗುರಿಯಾಗಿಸಿಕೊಂಡಿವೆ. ಈ ದೇಶದ ದಕ್ಷಿಣ ಪ್ರಾಂತ್ಯದಲ್ಲಿ ಹಿಜ್ಬೊಲ್ಲಾ ಹೋರಾಟಗಾರರು ಹಾಗೂ ಇಸ್ರೇಲಿ ಸೇನೆಯ ನಡುವೆ ಭಾರಿ ಘರ್ಷಣೆಗಳಾಗುತ್ತವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ದೇಶದಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಕುರಿತು ಅಂತರರಾಷ್ಟ್ರೀಯ ಸಮುದಾಯವು ಕಾಳಜಿಯನ್ನು ವ್ಯಕ್ತಪಡಿಸಿದೆ. ಇದರ ಮಧ್ಯೆ ಈ ದೇಶದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನ ಕಾರ್ಯಾಚರಣೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ವಿವಿಧ ರಾಷ್ಟ್ರಗಳು ತಕ್ಷಣವೇ ಈ ದಾಳಿಯನ್ನು ನಿಲ್ಲಿಸಬೇಕೆಂದು ಕರೆ ನೀಡಿವೆ. ಇಸ್ರೇಲ್ ದಾಳಿಯ ಕಾರಣ ಇತ್ತೀಚಿನ ದಿನಗಳಲ್ಲಿ ಐವರು ಶಾಂತಿಪಾಲನಾ ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಫ್ರಾನ್ಸ್, ಇಟಲಿ ಹಾಗೂ ಸ್ಪೇನ್ ದೇಶದ ನಾಯಕರುಗಳು ಸಭೆಯನ್ನು ನಡೆಸಿ, ಇಸ್ರೇಲ್ ನಡೆಸುತ್ತಿರುವ ದಾಳಿಗಳು ಸಮರ್ಥನೀಯವಲ್ಲ ಎಂದು ಹೇಳಿವೆ. ಹಿಜ್ಬೊಲ್ಲಾ ವಿರುದ್ಧ ಕಾರ್ಯಾಚರಣೆಯನ್ನು ನಡೆಸುವಾಗ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಮೇಲೆ ದಾಳಿ ಮಾಡಬಾರದು ಎಂದು ಅಮೇರಿಕಾ ಅಧ್ಯಕ್ಷರು ಹೇಳಿದ್ದಾರೆ.