ಮೆಕ್ಸಿಕೋದಲ್ಲಿ ಕೊಲ್ಲಲ್ಪಟ್ಟ ಯಾಜಕರೊಬ್ಬರಿಗಾಗಿ ಪ್ರಾರ್ಥಿಸಿದ ಸಿನೋಡ್ ಸಭೆ

ರೋಮ್ ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಸಿನೋಡ್ ಸಭೆಯು ಮೆಕ್ಸಿಕೋದಲ್ಲಿ ಕೊಲ್ಲಲ್ಪಟ್ಟಿರುವ ಮೆಕ್ಸಿಕೋದಲ್ಲಿನ ಆದಿವಾಸಿ ಸಮುದಾಯಗಳ ಪರ ಕಾರ್ಯಕರ್ತ ಫಾದರ್ ಮಾರ್ಸೆಲೋ ಪೆರೆಝ್ ಅವರಿಗಾಗಿ ಪ್ರಾರ್ಥಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಸಿಸ್ಟರ್ ಮರಿಯ ಡೆ ಲೊಸ್ ಡೊಲೊರೋಸ್ ಪಲೇನ್ಷಿಯಾ ಗೊಮೆಝ್ ಅವರು ಈ ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಹೇಳಿದರು.

ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್

ರೋಮ್ ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಸಿನೋಡ್ ಸಭೆಯು ಮೆಕ್ಸಿಕೋದಲ್ಲಿ ಕೊಲ್ಲಲ್ಪಟ್ಟಿರುವ ಮೆಕ್ಸಿಕೋದಲ್ಲಿನ ಆದಿವಾಸಿ ಸಮುದಾಯಗಳ ಪರ ಕಾರ್ಯಕರ್ತ ಫಾದರ್ ಮಾರ್ಸೆಲೋ ಪೆರೆಝ್ ಅವರಿಗಾಗಿ ಪ್ರಾರ್ಥಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಸಿಸ್ಟರ್ ಮರಿಯ ಡೆ ಲೊಸ್ ಡೊಲೊರೋಸ್ ಪಲೇನ್ಷಿಯಾ ಗೊಮೆಝ್ ಅವರು ಈ ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಹೇಳಿದರು.

ಮೆಕ್ಸಿಕೋದ ಸ್ಯಾನ್ ಕ್ರಿಸ್ಟೋಡಾಲ್ ಪ್ರದೇಶದಲ್ಲಿನ ಕುಕ್ಷಿತಾಲಿ ಧರ್ಮಕೇಂದ್ರದ ಗುರುಗಳಾಗಿ ಫಾದರ್ ಮಾರ್ಸೆಲೋ ಪೆರೆಜ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಇವರು ಇಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯಗಳ ಪರವಾಗಿ ದನಿಯೆತ್ತುತ್ತಿದ್ದರು. ಅಕ್ಟೋಬರ್ 20 ರಂದು ಬಲಿಪೂಜೆಯನ್ನು ಅರ್ಪಿಸಿದ ನಂತರ ಅವರನ್ನು ಕೊಲ್ಲಲಾಯಿತು ಎಂದು ವರದಿಯಾಗಿದೆ. 

ಈ ವಿಷಯವನ್ನು ಅರಿತ ಸಿನೋಡ್ ಸಭೆಯ ಸದಸ್ಯರು ಮೃತ ಗುರುವಿನ ಆತ್ಮಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. "ಅವರು ಶಾಂತಿಗಾಗಿ ಹೋರಾಡಿದ ಯೋಧರಾಗಿದ್ದರು" ಎಂದು ಸಿಸ್ಟರ್ ಮರಿಯ ಡೆ ಲೋಸ್ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದರು. ಫಾದರ್ ಮಾರ್ಸೆಲೋ ಸ್ವತಃ ಮೆಕ್ಸಿಕೋದ ಬುಡಕಟ್ಟು ಸಮುದಾಯದಿಂದ ಬಂದವರಾಗಿದ್ದು, ಬುಡಕಟ್ಟು ಸಮುದಾಯಗಳ ಹಕ್ಕುಗಳ ಪರವಾಗಿ ಅವರು ಸದಾ ದನಿಯೆತ್ತಿ ಹೋರಾಡುತ್ತಿದ್ದರು ಎಂದು ಸಿಸ್ಟರ್ ಮರಿಯ ಹೇಳಿದರು.

ಮುಂದುವರೆದು ಮಾತನಾಡಿದ ಅವರು ಫಾದರ್ ಮಾರ್ಸೆಲೋ ಅವರ ಕೊಲೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಹೇಳಿದರು. 

22 October 2024, 17:05