ಫ್ಲೋರಿಡಾದ ಟಂಪಾ ಎಂಬಲ್ಲಿಗೆ ಅಪ್ಪಳಿಸಲಿರುವ "ಮಿಲ್ಟನ್" ಚಂಡಮಾರುತ

ಅಮೆರಿಕದ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದ್ದ ಹೆಲೆನ್ ಚಂಡಮಾರುತ 200 ಮಂದಿಯನ್ನು ಬಲಿ ಪಡೆದ ಕಹಿ ನೆನಪು ಮಾಸುವ ಮುನ್ನವೇ ಇದೀಗ ಮತ್ತೊಂದು ಚಂಡಮಾರುತ ಅಮೆರಿಕದತ್ತ ಧಾವಿಸುತ್ತಿದೆ. ಈ ಚಂಡಮಾರುತ ಅಮೆರಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಆಗಲಿದ್ದು, ಇದಕ್ಕೆ ಮಿಲ್ಟನ್ ಎಂದು ಹೆಸರಿಡಲಾಗಿದೆ. ಗಂಟೆಗೆ 250ಕ್ಕೂ ಹೆಚ್ಚು ಕಿ. ಮೀ. ವೇಗದಲ್ಲಿ ಗಾಳಿ ಅಪ್ಪಳಿಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಹೊರ ಹಾಕಿದೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಅತ್ಯಂತ ಪ್ರಬಲ ಚಂಡಮಾರುತ ಎಂದೇ ಬಣ್ಣಿಸಲಾಗಿರುವ ಮಿಲ್ಟನ್ ಚಂಡಮಾರುತ ಅಮೆರಿಕದ ಫ್ಲೋರಿಡಾ ರಾಜ್ಯದ ಕಡಲ ತೀರಕ್ಕೆ ಅಪ್ಪಳಿಸಲು ಕ್ಷಣಗಣನೆ ಶುರುವಾಗಿದೆ. ಅಮೆರಿಕದ ಸ್ಥಳೀಯ ಕಾಲ ಮಾನ ಬುಧವಾರ ತಡ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಈ ಚಂಡಮಾರುತ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೇ ಫ್ಲೋರಿಡಾ ರಾಜ್ಯದ ಕಡಲ ತೀರದ ನಿವಾಸಿಗಳಿಗೆ ಈ ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಪದೇ ಪದೇ ಮನವಿ ಮಾಡುತ್ತಿದ್ದಾರೆ. ಜೊತೆಯಲ್ಲೇ ಇದು ಸಾವು - ಬದುಕಿನ ಪ್ರಶ್ನೆ ಎಂದೂ ಜೋ ಬೈಡನ್ ಬಣ್ಣಿಸಿದ್ದು, ತಮ್ಮ ಮಾತುಗಳು ಅತಿಶಯೋಕ್ತಿ ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದ್ದ ಹೆಲೆನ್ ಚಂಡಮಾರುತ 200 ಮಂದಿಯನ್ನು ಬಲಿ ಪಡೆದ ಕಹಿ ನೆನಪು ಮಾಸುವ ಮುನ್ನವೇ ಇದೀಗ ಮತ್ತೊಂದು ಚಂಡಮಾರುತ ಅಮೆರಿಕದತ್ತ ಧಾವಿಸುತ್ತಿದೆ. ಈ ಚಂಡಮಾರುತ ಅಮೆರಿಕ ಇತಿಹಾಸದಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಆಗಲಿದ್ದು, ಇದಕ್ಕೆ ಮಿಲ್ಟನ್ ಎಂದು ಹೆಸರಿಡಲಾಗಿದೆ. ಗಂಟೆಗೆ 250ಕ್ಕೂ ಹೆಚ್ಚು ಕಿ. ಮೀ. ವೇಗದಲ್ಲಿ ಗಾಳಿ ಅಪ್ಪಳಿಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಹೊರ ಹಾಕಿದೆ.

ಮಿಲ್ಟನ್ ಚಂಡಮಾರುತವನ್ನು ಕೆಟಗರಿ 5 ರ ಚಂಡಮಾರುತ ಎಂದು ಅಮೆರಿಕದ ಹವಾಮಾನ ತಜ್ಞರು ಅಂದಾಜು ಮಾಡಿದ್ದಾರೆ. ಅಮೆರಿಕದಲ್ಲಿ ಹೆಲೆನ್ ಚಂಡಮಾರುತ ಆರ್ಭಟಿಸಿದ ಎರಡೇ ವಾರಗಳ ಅಂತರದಲ್ಲೇ ಮಿಲ್ಟನ್ ಚಂಡಮಾರುತ ಧಾವಿಸುತ್ತಿದೆ. 

09 October 2024, 19:00