ಹುಡುಕಿ

ಬೈರೂತ್ ಮೇಲೆ ಇಸ್ರೇಲ್ ದಾಳಿ; ರಕ್ಷಣಾ ಸಿಬ್ಬಂಧಿ ಸಾವು

'ದಾಳಿಯಲ್ಲಿ ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಬಿಲಾಲ್ ರಾದ್ ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿ ಅವರ ಮೃತದೇಹ ಪತ್ತೆಯಾಗಿದೆ. ನಮಗೆ ತಿಳಿದಿರುವ ಪ್ರಕಾರ ಇನ್ನೂ 20 ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ' ಎಂದು ಗವರ್ನರ್ ಬಚಿರ್ ಖೋಡ್ ತಿಳಿಸಿದ್ದಾರೆ.

 ವರದಿ: ವ್ಯಾಟಿಕನ್ ನ್ಯೂಸ್, ವಿವಿಧ ಸುದ್ದಿ ಮಾಧ್ಯಮಗಳು

ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ಪಡೆಗಳು ಗುರುವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 12 ರಕ್ಷಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಬಾಲ್‌ಬೇಕ್‌ ನಗರದಲ್ಲಿರುವ ನಾಗರಿಕ ರಕ್ಷಣಾ ಕೇಂದ್ರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾಗಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

'ದಾಳಿಯಲ್ಲಿ ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಬಿಲಾಲ್ ರಾದ್ ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿ ಅವರ ಮೃತದೇಹ ಪತ್ತೆಯಾಗಿದೆ. ನಮಗೆ ತಿಳಿದಿರುವ ಪ್ರಕಾರ ಇನ್ನೂ 20 ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ' ಎಂದು ಗವರ್ನರ್ ಬಚಿರ್ ಖೋಡ್ ತಿಳಿಸಿದ್ದಾರೆ.

ಲೆಬನಾನ್ ಸರ್ಕಾರದ ಅಧೀನದಲ್ಲಿರುವ 'ಲೆಬನಾನ್ ನಾಗರಿಕ ರಕ್ಷಣಾ ಏಜೆನ್ಸಿ'ಯು ತುರ್ತು ಹಾಗೂ ವೈದ್ಯಕೀಯ ನೆರವನ್ನು ನೀಡುವ ಸಂಸ್ಥೆಯಾಗಿದೆ. ಇರಾನ್ ಬೆಂಬಲಿತ ಹಿಬ್ಬುಲ್ಲಾಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.

ಈ ದಾಳಿಯ ಬಗ್ಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಇದುವೆರೆಗೂ ಬಂದಿಲ್ಲ.

ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆದ ದಿನದಂದೇ ಬೈರೂತ್ ಮೇಲೆಯೂ ಆಕ್ರಮಣ ನಡೆದಿದೆ. ಪ್ಯಾಲೆಸ್ಟೀನಿ ಇಸ್ಲಾಮಿಕ್ ಜಿಹಾದ್‌ನೊಂದಿಗೆ ಸಂಬಂಧ ಇರುವ ಇರಾನ್ ಬೆಂಬಲಿತ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸಮರ್ಥನೆ ನೀಡಿದೆ.

ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿ 16 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಮಕ್ಕಳು ಹಾಗೂ ಮಹಿಳೆಯರು ಸೇರಿದ್ದಾರೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮಗಳು ಹೇಳಿವೆ.

15 November 2024, 16:56