ಹುಡುಕಿ

ಮುಂಬೈ ಮಹಾಧರ್ಮಪ್ರಾಂತ್ಯದ ಸಹ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬಿಷಪ್ ಜಾನ್ ರೋಡ್ರಿಗೆಸ್

ಕಳೆದ ಒಂದು ವರ್ಷದಿಂದ ಪುಣೆ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಧರ್ಮಾಧ್ಯಕ್ಷ ಜಾನ್ ರೊಡ್ರಿಗೆಸ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಮುಂಬೈ ಮಹಾಧರ್ಮಪ್ರಾಂತ್ಯದ ಸಹ ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಆ ಮೂಲಕ ಅವರು ಕಾರ್ಡಿನಲ್ ಓಸ್ವಾಲ್ಡ್ ಗ್ರೇಶಿಯಸ್ ಅವರಿಂದ ತೆರವಾಗುವ ಸ್ಥಾನವನ್ನು ತುಂಬಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ನೇಮಿತ-ಮಹಾಧರ್ಮಾಧ್ಯಕ್ಷ ಜಾನ್ ರೊಡ್ರಿಗೆಸ್ ಅವರು ಆಗಸ್ಟ್ 21, 1967 ರಂದು ಮುಂಬೈ ನಗರದಲ್ಲಿ ಜನಿಸಿದರು. ರೋಮ್ ನಗರದ ಪೊಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾನಿಲಯದಿಂದ ಡೊಗ್ಮ್ಯಾಟಿಕ್ ಥಿಯಾಲಜಿ ವಿಷಯದಲ್ಲಿ ಅವರು ಲೈಸೆನ್ಷಿಯೇಟ್ ಪದವಿಯನ್ನು ಪಡೆದರು. ಏಪ್ರಿಲ್ 18, 1998 ರಂದು ಇವರು ಮುಂಬೈ ಮಹಾಧರ್ಮಪ್ರಾಂತ್ಯಕ್ಕೆ ಗುರುವಾಗಿ ಅಭ್ಯಂಗಿತರಾದರು.

ಇವರು ಮುಂಬೈ ನಗರದ ಮಾಹಿಮ್ ಪ್ರದೇಶದಲ್ಲಿ ಸಂತ ಮಿಖಾಯೇಲರ ಧರ್ಮಕೇಂದ್ರದ ಸಹಾಯಕ ಗುರುಗಳಾಗಿ, ಮಹಾಧರ್ಮಾಧ್ಯಕ್ಷರ ಕಾರ್ಯದರ್ಶಿಯಾಗಿ, ಹಾಗೂ ಗೋರೆಗಾಂವ್'ನಲ್ಲಿರುವ ಸಂತ ಹತ್ತನೇ ಭಕ್ತಿನಾಥರ ಸೆಮಿನರಿಯಲ್ಲಿ ಡೊಗ್ಮ್ಯಾಟಿಕ್ ಥಿಯಾಲಜಿ ಪ್ರಾಧ್ಯಾಪಕರಾಗಿ ಸುದೀರ್ಘ ಸೇವಯನ್ನು ಸಲ್ಲಿಸಿದ್ದಾರೆ. 2013 ರಲ್ಲಿ ಇವರು ಮುಂಬೈ ಮಹಾಧರ್ಮಪ್ರಾಂತ್ಯಕ್ಕೆ ಸಹಾಯಕ ಧರ್ಮಾಧ್ಯಕ್ಷರಾಗಿ ನೇಮಕವಾದರು. 

2023 ರಲ್ಲಿ ಇವರನ್ನು ಪೂನಾ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರನ್ನಾಗಿ ನೇಮಿಸಿ, ವರ್ಗಾಯಿಸಲಾಗಿತ್ತು.  

29 November 2024, 21:21