ಗಾಝಾ ಮೇಲೆ ಇಸ್ರೇಲ್ ನಸುಕಿನ ದಾಳಿ, 30 ಜನರ ಹತ್ಯೆ
ವರದಿ: ವ್ಯಾಟಿಕನ್ ನ್ಯೂಸ್
ಗಾಝಾ ಪಟ್ಟಿಯಾದ್ಯಂತ ಗುರುವಾರ ರಾತ್ರಿ ಇಸ್ರೇಲ್ ಮಿಲಿಟರಿಯ ದಾಳಿಯಲ್ಲಿ ಕನಿಷ್ಠ 30 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.
ಇಸ್ರೇಲ್ ಟ್ಯಾಂಕ್‍ನ ಶೆಲ್ ದಾಳಿಯ ಬಳಿಕ ಗಾಝಾದ ನುಸೀರಾತ್ ಶಿಬಿರದ ಉತ್ತರದಲ್ಲಿ 19 ಫೆಲೆಸ್ತೀನೀಯರ ಮೃತದೇಹ ಪತ್ತೆಯಾಗಿದೆ. ಗಾಝಾದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್‍ನ ಕೆಲವು ಟ್ಯಾಂಕ್‍ಗಳು ಗಾಝಾದಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.
"ಗಾಝಾ ಪಟ್ಟಿಯಲ್ಲಿ ಕಾರ್ಯಾಚರಣೆಯ ಭಾಗವಾಗಿ ಸಶಸ್ತ್ರ ಹೋರಾಟಗಾರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ' ಎಂದು ಇಸ್ರೇಲ್ ಸೇನೆ ಶುಕ್ರವಾರ ಹೇಳಿಕೆ ನೀಡಿದೆ. ಈ ಮಧ್ಯೆ, ಕಳೆದ ಕೆಲವು ತಿಂಗಳಲ್ಲಿ ಗಾಝಾದಲ್ಲಿ ನಡೆಸಿದ ಕಾರ್ಯಾಚರಣೆಯ ಸಂದರ್ಭ ಬಂಧಿಸಿದ್ದ ಸುಮಾರು 30 ಫೆಲೆಸ್ತೀನೀಯರನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆಗೊಳಿಸಿದ್ದು ಅವರು ದಕ್ಷಿಣ ಗಾಝಾದ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.