ಹೈಟಿ: ಮಕ್ಕಳನ್ನು ಉಗ್ರ ಗುಂಪುಗಳಿಗೆ ನಿಯೋಜನೆ ಮಾಡುತ್ತಿರುವ ಸಂಖ್ಯೆಯಲ್ಲಿ ತೀವ್ರ ಏರಿಕೆ
ವರದಿ: ಫೀಬಿ ಮಾರ್ಟೆಲ್, ಅಜಯ್ ಕುಮಾರ್
ಹೈಟಿ ದೇಶದಲ್ಲಿ ಮಕ್ಕಳನ್ನು ಉಗ್ರರು ತಮ್ಮ ಗುಂಪುಗಳಿಗೆ ನಿಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಹಲವು ತಿಂಗಳುಗಳಲ್ಲಿ ಮಕ್ಕಳನ್ನು ಉಗ್ರ ಗುಂಪುಗಳಿಗೆ ಸೇರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಎಂದು ಮಾನವೀಯ ಮಾಧ್ಯಮಗಳು ವರದಿ ಮಾಡಿವೆ.
ಬಹುತೇಕ ಈ ಗುಂಪುಗಳಲ್ಲಿ ಅರ್ಧದಷ್ಟು ಮಕ್ಕಳೇ ತುಂಬಿ ಹೋಗಿದ್ದಾರೆ ಎಂದು ವರದಿಯಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಆಯೋಗವಾದ ಯೂನಿಸೆಫ್ ಈ ವರದಿಯನ್ನು ಬಿಡುಗಡೆ ಮಾಡಿದೆ.
ಕಳೆದ ದಶಕದಿಂದ ಹೈಟಿ ದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಇಲ್ಲವಾಗಿದ್ದು, ಈ ದೇಶವು ಬಹುತೇಕ ಉಗ್ರ ಗುಂಪುಗಳ ತಾಣವಾಗಿದೆ. ಇಲ್ಲಿ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದು, ಇಲ್ಲಿನ ಬಹುತೇಕ ಮಕ್ಕಳು ತಮ್ಮ ಕುಟುಂಬಗಳಿಂದ ದೂರವಾಗಿದ್ದಾರೆ.
ಉಗ್ರ ಗುಂಪುಗಳು ಮಕ್ಕಳನ್ನು ತಮ್ಮ ಗುಂಪುಗಳಿಗೆ ಸಾವಿರಾರು ಡಾಲರುಗಳ ಆಸೆಯನ್ನು ತೋರಿಸಿ ಸೇರಿಸಿಕೊಳ್ಳುತ್ತಿದ್ದಾರೆ. ಅವರ ಗುಂಪುಗಳಿಗೆ ಸೇರದ ಮಕ್ಕಳನ್ನು ಬಂದೂಕುಗಳಿಂದ ಹೆದರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಆಯೋವು ವರದಿ ಮಾಡಿದೆ.
ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಗಳು ಇಲ್ಲಿಗೆ ಬಂದರೂ ಸಹ ಪರಿಸ್ಥತಿ ಬದಲಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದ ದಿನೇ ದಿನೇ ಸಾವಿರಾರು ಜನರು ದೇಶವನ್ನು ತೊರೆಯಲು ಹರಸಾಹಸ ಪಡುತ್ತಿದ್ದಾರೆ.