ಹುಡುಕಿ

ಇಂಡೋನೇಷಿಯಾದಲ್ಲಿ ಜ್ವಾಲಾಮುಖಿ ಸ್ಪೋಟ; ಓರ್ವ ಸುವಾತ್ರಾ ಪ್ರಸಾರಕಿ ಭಗಿನಿ ದುರ್ಮರಣ

ಇಂಡೋನೇಷಿಯಾದ ಪೂರ್ವ ಫ್ಲೋರೆಸ್ ಪ್ರಾಂತ್ಯದಲ್ಲಿನ ಬೋರಿ ಗ್ರಾಮದಲ್ಲಿರುವ ಮೌಂಟ್ ಲೆವೊಟೊಬಿ ಲಾಕಿ-ಲಾಕಿ ಎಂಬ ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ ಓರ್ವವಕಥೋಲಿಕ ಭಗಿನಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ವರದಿ: ಲಿಕಾಸ್ ನ್ಯೂಸ್

ಇಂಡೋನೇಷಿಯಾದ ಪೂರ್ವ ಫ್ಲೋರೆಸ್ ಪ್ರಾಂತ್ಯದಲ್ಲಿನ ಬೋರಿ ಗ್ರಾಮದಲ್ಲಿರುವ ಮೌಂಟ್ ಲೆವೊಟೊಬಿ ಲಾಕಿ-ಲಾಕಿ ಎಂಬ ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ ಓರ್ವವಕಥೋಲಿಕ ಭಗಿನಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.   

ಮಿಷನರಿ ಸರ್ವೆಂಟ್ಸ್ ಆಫ್ ದಿ ಹೋಲಿ ಸ್ಪಿರಿಟ್ ಧಾರ್ಮಿಕ ಸಭೆಯ ಸಿಸ್ಟರ್ ನಿಕೋಲಿನ್ ಪಡ್ಜೋ ಅವರು ಜ್ವಾಲಾಮುಖಿಯಿಂದ ನಿಧನ ಹೊಂದಿದ ದುರ್ದೈವಿಯಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ, ಮನೆಗಳ ಮೇಲೆ ಬಿದ್ದ ಕಲ್ಲುಗಳು ಹಲವಾರು ಜನರನ್ನು ಕೊಂದಿವೆ. ಇದರಲ್ಲಿ ಸೇಂಟ್ ಗೇಬ್ರಿಯೇಲ್ ಸನ್ಯಾಸಿನಿ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಸ್ಟರ್ ನಿಕೋಲಿನ್ ಸಹ ಒಬ್ಬರಾಗಿದ್ದಾರೆ.

ಈ ಜ್ವಾಲಾಮುಖಿ ಸ್ಪೋಟದಿಂದ ಇಲ್ಲಿನ ಬೋರಿ ಗ್ರಾಮದ ಬಹುತೇಕ ಜನರು ಪಲಾಯನ ಮಾಡುತ್ತಿದ್ದು, ನೂರಾರು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ ಎಂದು ವರದಿಯಾಗಿದೆ. ಮತ್ತೆ ಜ್ವಾಲಾಮುಖಿ ಸ್ಪೋಟಗೊಳ್ಳುವ ಭಯದಿಂದ ಜನರು ಊರನ್ನು ತೊರೆದು ಹೋಗುತ್ತಿರುವುದು ಕಂಡು ಬಂದಿದೆ.  

06 November 2024, 16:12