ಗಾಝಾ-ಲೆಬನಾನ್ ಪ್ರದೇಶಗಳ ಮೇಲೆ ರಾತ್ರಿ ದಾಳಿ ನಡೆಸಿದ ಇಸ್ರೇಲ್
ಗಾಜಾ ಹಾಗೂ ಲೆಬನಾನ್‌ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ವರದಿ: ವ್ಯಾಟಿಕನ್ ನ್ಯೂಸ್
ಗಾಜಾ ಹಾಗೂ ಲೆಬನಾನ್‌ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ಇಸ್ರೇಲ್ ಸೇನೆಯು ರಾತ್ರೋರಾತ್ರಿ ನಡೆಸಿದ ದಾಳಿಯಿಂದಾಗಿ, ಮಹಿಳೆಯರು, ಮಕ್ಕಳು ಸೇರಿದಂತೆ 14 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯು ಹೇಳಿದೆ. ಆದರೆ, ಇಸ್ರೇಲ್ ಸೇನೆಯು, ಹತ್ತಾರು ಉಗ್ರರನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.
ಯುದ್ಧದಿಂದ ನಿರಾಶ್ರಿತರಾಗಿರುವವರಿಗಾಗಿ ಖಾನ್ ಯೂನಿಸ್ ನಗರದ ದಕ್ಷಿಣದಲ್ಲಿ ತೆರೆಯಲಾಗಿರುವ ಶಿಬಿರಗಳ ಮೇಲೆ ದಾಳಿ ನಡೆದಿದೆ. ಇಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮುದ್ ಬಸ್ಸಲ್ ತಿಳಿಸಿದ್ದಾರೆ.
ಮಾನವೀಯ ನೆರವು ಸಂಘಟನೆ 'ಪ್ಯಾಲೆಸ್ಟೀನಿಯಯನ್ ರೆಡ್ ಕ್ರೆಸೆಂಟ್' ಸಹ ದಾಳಿಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ 'ನಾಸ್ಪೆರ್' ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.
09 November 2024, 16:04