ಹುಡುಕಿ

ಪೋಪ್: ಸಿನೊಡಾಲಿಟಿ ಮತ್ತು ಕ್ರೈಸ್ತ ಪಂಗಡಗಳ ಐಕ್ಯತೆ ಬೇರ್ಪಡಿಸಲಾಗದ್ದಾಗಿದೆ

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ಸಿರೋಮಲಂಕರ ಮಾರ್ ತೋಮ ಸಿರಿಯನ್ ಚರ್ಚ್ ಕ್ರೈಸ್ತ ಪಂಗಡದ "ಹೋಲಿ ಸಿನೊಡ್" ಸದಸ್ಯರುಗಳನ್ನು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ಸಿರೋಮಲಂಕರ ಮಾರ್ ತೋಮ ಸಿರಿಯನ್ ಚರ್ಚ್ ಕ್ರೈಸ್ತ ಪಂಗಡದ "ಹೋಲಿ ಸಿನೊಡ್" ಸದಸ್ಯರುಗಳನ್ನು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ್ದಾರೆ. 

ಎರಡು ಧರ್ಮಸಭೆಗಳ ನಡುವಿನ ಸಂಬಂಧದ ಕುರಿತು ಶ್ಲಾಘನೆಯನ್ನು ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್ ಅವರು, ಕ್ರೈಸ್ತ ಪಂಗಡಗಳ ಐಕ್ಯತೆ ಎಂಬುದು ನಿಜಕ್ಕೂ ಮಾದರಿಯಾಗಿದ್ದು, ಇನ್ನಷ್ಟು ಉತ್ತಮ ಮಟ್ಟದ ಐಕ್ಯತೆಗಾಗಿ ಇವುಗಳ ನಡುವೆ ಸಂವಾದ ನಡೆಯುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಸಿರೋಮಲಬಾರ್ ಧರ್ಮಸಭೆಯ ಪ್ರಮುಖ ಧರ್ಮಾಧ್ಯಕ್ಷರುಗಳು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ನೀಡಿದ್ದಾರೆ.

ಸಿರೋಮಲಂಕರ ಧರ್ಮಸಭೆಯ ಮೆಟ್ರೊಪಾಲಿಟನ್ ಆಗಿರುವ ಥಿಯೊಡೋಸಿಯುಸ್ ಮಾರ್ ತೋಮಾ ಅವರನ್ನು ಹಾಗೂ ಇನ್ನಿತರ ಧರ್ಮಾಧ್ಯಕ್ಷರುಗಳು ಹಾಗೂ ಭಕ್ತಾಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್ ಅವರು, ಈ ನಿಮ್ಮ ಧರ್ಮಸಭೆ ಪೂರ್ವ ಹಾಗೂ ಪಶ್ಚಿಮ ಧರ್ಮಸಭೆಗಳ ನಡುವಿನ ಅಂತರವನ್ನು ನೀಗುವ ಸೇತುವೆಯಾಗಿದೆ ಎಂದು ಹೇಳಿದ್ದಾರೆ.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಸಿರೋಮಲಬಾರ್ ಧರ್ಮಸಭೆಯ ಸೇವೆ ಹಾಗೂ ವಿವಿಧ ಸೇವಾಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.    

11 November 2024, 16:47