ಹುಡುಕಿ

ಜಿ20 ಶೃಂಗಸಭೆ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ದಮನಕ್ಕೆ ಎರಡು ರಾಷ್ಟ್ರ ಸೂತ್ರ

ರಿಯೊ ಡಿ ಜನೈರೊ: ಬ್ರೆಝಿಲ್‌ ನಲ್ಲಿ 20 ಪ್ರಮುಖ ಆರ್ಥಿಕತೆಗಳ ಗುಂಪಿನ ಶೃಂಗಸಭೆಯು ಈಗ ಮುಂದುವರಿದಿರುವ ಪ್ರಮುಖ ಯುದ್ಧಗಳು ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಕರೆ ನೀಡುವ ನಿರ್ಣಯವನ್ನು ಮಂಡಿಸಿದೆ.

ವರದಿ: ವ್ಯಾಟಿಕನ್ ನ್ಯೂಸ್

ಬ್ರೆಝಿಲ್‌ ನಲ್ಲಿ 20 ಪ್ರಮುಖ ಆರ್ಥಿಕತೆಗಳ ಗುಂಪಿನ ಶೃಂಗಸಭೆಯು ಈಗ ಮುಂದುವರಿದಿರುವ ಪ್ರಮುಖ ಯುದ್ಧಗಳು ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಕರೆ ನೀಡುವ ನಿರ್ಣಯವನ್ನು ಮಂಡಿಸಿದೆ.

ಗಾಝಾ ಪಟ್ಟಿಯಲ್ಲಿನ ದುರಂತ ಮಾನವೀಯ ಪರಿಸ್ಥಿತಿ ಮತ್ತು ಲೆಬನಾನ್‍ನಲ್ಲಿನ ಉಲ್ಬಣದ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿದ್ದು, ಮಾನವೀಯ ನೆರವಿನ ಹರಿವನ್ನು ವಿಸ್ತರಿಸುವ ಮತ್ತು ನಾಗರಿಕರ ರಕ್ಷಣೆಯನ್ನು ಬಲಪಡಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಮಾನವೀಯ ನೆರವು ಪೂರೈಕೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

ವಿಶ್ವಸಂಸ್ಥೆ ಸನದಿನ ಪ್ರಕಾರ, ಯಾವುದೇ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ಪ್ರಾದೇಶಿಕ ಸ್ವಾಧೀನ ಪಡೆಯಲು ಬೆದರಿಕೆ ಅಥವಾ ಬಲ ಪ್ರಯೋಗದಿಂದ ಎಲ್ಲಾ ದೇಶಗಳೂ ದೂರವಿರಬೇಕು.

ಅಂತರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಸೇರಿದಂತೆ ಅಂತರಾಷ್ಟ್ರೀಯ ಕಾನೂನುಗಳಿಗೆ ಎಲ್ಲಾ ಪಕ್ಷಗಳೂ ತಮ್ಮ ಜವಾಬ್ದಾರಿಗಳನ್ನು ಅನುಸರಿಸಬೇಕು ಮತ್ತು ಈ ನಿಟ್ಟಿನಲ್ಲಿ ನಾಗರಿಕರು ಮತ್ತು ಮೂಲಸೌಕರ್ಯಗಳ ವಿರುದ್ಧದ ಎಲ್ಲಾ ದಾಳಿಗಳನ್ನೂ ಖಂಡಿಸಿದೆ.

20 November 2024, 17:55